NEWS

ಐದನೇ ವರ್ಷದ ಮದುವೆ ಸಂಭ್ರಮ.. ರಾಧಿಕಾಗೆ ಯಶ್ ಕೊಟ್ಟ ವಿಶೇಷ ಉಡುಗೊರೆ ನೋಡಿ..

ಸ್ಯಾಂಡಲ್ವುಡ್ ನ ಸ್ಟಾರ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಸಧ್ಯ ಇದೀಗ ತಮ್ಮ ದಾಂಪತ್ಯ ಜೀವನದ ಐದನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.. ಹೌದು ರಾಕಿ ಭಾಯ್ ಹಾಗೂ

ರಾಧಿಕಾ ಪಂಡಿತ್ ಮನೆಯಲ್ಲಿ ಸಾಲು ಸಾಲು ಸಂಭ್ರಮದ ದಿನಗಳು ಆಗಮಿಸುತ್ತಿದ್ದು ತಿಂಗಳ ಹಿಂದಷ್ಟೇ ಮಗಮ ಹುಟ್ಟುಹಬ್ಬ ಆಚರಿಸಿದ ಜೋಡಿ ಮೊನ್ನೆ ಮೊನೆಯಷ್ಟೇ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ

ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೀಗ ಮದುವೆ ದಿನದ ಸಂಭ್ರಮ.. ಇನ್ನು ಕೆಲ ದಿನಗಳಲ್ಲಿ ಯಶ್ ಅವರ ಹುಟ್ಟುಹಬ್ಬವೂ ಸಹ ಆಗಮಿಸುತ್ತಿದ್ದು ಅದಾಗಲೇ ಅಭಿಮಾನಿಗಳು ನೆಚ್ಚಿನ ಸ್ಟಾರ್ ಹುಟ್ಟುಹಬ್ಬ ಆಚರಿಸಲು ಸಕಲ ತಯಾರಿ ನಡೆಸುತ್ತಿದ್ದಾರೆ.

ಇನ್ನು ಇತ್ತ 2016 ರ ಡಿಸೆಂಬರ್ ಒಂಭತ್ತರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯಶ್ ರಾಧಿಕಾ ಇದೀಗ ಐದನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು‌ ಯಶ್ ಅವರು ಪ್ರೀತಿಯ ಮಡದಿಗೆ ವಿಶೇಷ ಉಡುಗೊರೆಯನ್ನೂ ಸಹ

ನೀಡಿದ್ದಾರೆ.. ಹೌದು ರಾಧಿಕಾ ಯಶ್ ಏನೂ ಇಲ್ಲದಾಗ ಪ್ರೀತಿಸಲು ಶುರು ಮಾಡಿ ಆ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ನಂತರ ಜೀವನದಲ್ಲಿ ಸೆಟಲ್ ಆದ ಬಳಿಕವೇ ಮದುವೆಯಾಗುವ ನಿರ್ಧಾರ ಮಾಡಿದ್ದ ಜೋಡಿ ಅಂದುಕೊಂಡಂತೆ ಸ್ಟಾರ್ ಗಿರಿ ಬಂದ ನಂತರವೇ ದಾಂಪತ್ಯ

ಜೀವನಕ್ಕೆ ಕಾಲಿಟ್ಟರು.. ಇನ್ನು ಪರಸ್ಪರ ಅತಿಯಾಗಿ ಪ್ರೀತಿಸುವ ಯಶ್ ಹಾಗೂ ರಾಧಿಕಾ ಪಂಡಿತ್ ಪರಸ್ಪರ ಅವರಿಬ್ಬರು ಗೌರವಿಸುವ ರೀತಿ ನಿಜಕ್ಕೂ ಪ್ರತಿಯೊಬ್ಬ ದಂಪತಿಗಳ ನಡುವೆಯೂ ಇರಬೇಕಾದ ಅತಿ ಅವಶ್ಯಕ ಗುಣವಾಗಿದೆ..

 

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇನ್ನು ರಾಧಿಕಾ ಅವರಿಗಾಗಿ ಆಗಾಗ ಸರ್ಪ್ರೈಸ್ ಕೊಟ್ಟು ಅವರ ಕನಸುಗಳನ್ನು ನೆರವೇರಿಸುವ ಯಶ್ ಇದೀಗ ರಾಧಿಕಾ ಅವರ ಮತ್ತೊಂದು ಕನಸನ್ನೂ ಸಹ ನೆರವೇರಿಸಿದ್ದಾರೆ.. ಹೌದು ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಜೀವನದ ವಿಶೇಷ ದಿನಗಳನ್ನು ಬಹಳ ವಿಶೇಷವಾಗಿ

ಸೆಲಿಬ್ರೇಟ್ ಮಾಡುವುದು ಎಲ್ಲರಿಗೂ ತಿಳಿದೇ ಇದೆ.. ಮಗುವಿನ ಆಗಮನದ ವಿಚಾರದಿಂದ ಹಿಡಿದು ತಮ್ಮ ಜೀವನದ ಎಲ್ಲಾ ಸಂಭ್ರಮಗಳನ್ನೂ ಸಹ ವಿಶೇಷವಾಗಿಸಿದ್ದರು.. ಇನ್ನು ಅದೇ ರೀತಿ ತಾವಿಬ್ಬರು ಪ್ರೀತಿಸುವ ಸಮಯದಲ್ಲಿಯೇ ಮನೆಯೊಂದರ ಕಲ್ಪನೆಯನ್ನು ಮಾಡಿದ್ದರು.. ಮದುವೆಯ ನಂತರ ಆ ಕನಸನ್ನೂ ಸಹ ಯಶ್ ನನಸು ಮಾಡಿದರು..

ಹೌದು ಮದುವೆಯಾದ ಕೆಲ ತಿಂಗಳಲ್ಲಿ ತಮ್ಮ ಕನಸಿನ ಮನೆ ನಿರ್ಮಾಣದ ಕೆಲಸವನ್ನು ಶುರು ಮಾಡಿದ್ದ ಯಶ್ ಹಾಗೂ ರಾಧಿಕಾ ಸತತ ಮೂರು ವರ್ಷದ ಬಳಿಕ ಕೆಲ ತಿಂಗಳ ಹಿಂದಷ್ಟೇ ಸರಳವಾಗಿ ಗೃಹಪ್ರವೇಶ ನೆರವೇರಿಸಿ ನೂತನ ಮನೆಗೆ ಕಾಲಿಟ್ಟಿದ್ದರು.. ಯಶ್ ರಾಧಿಕಾ ಪಂಡಿತ್ ಹಾಗೂ

ಇಬ್ಬರ ಮಕ್ಕಳು ನೂತನ‌ ಮನೆಯಲ್ಲಿ ವಾಸವಿದ್ದು ಇತ್ತ ಯಶ್ ಅವರ ತಂದೆ ತಾಯಿ ಇಬ್ಬರೂ ಸಹ ಹಾಸನದ ತಮ್ಮ ತೋಟದ ಮನೆಯಲ್ಲೊ ನೆಲೆಸಿದ್ದಾರೆ.. ಇನ್ನು ಇದೀಗ ಮದುವೆ ದಿನದ ಸಂಭ್ರಮದಲ್ಲಿರುವ ಯಶ್ ಈ ದಿನದ ವಿಶೇಷವಾಗಿ ಮಡದಿಯ ಮತ್ತೊಂದು ಕನಸನ್ನು ನನಸು ಮಾಡುವ ಮೂಲಕ ಉಡುಗೊರೆ ನೀಡಿದ್ದಾರೆ..

ಹೌದು ಮದುವೆ ದಿನದ ವಿಶೇಷದ ಅಂಗವಾಗಿ ರಾಧಿಕಾರ ನೆಚ್ಚಿನ ಜಾಗ ಗೋವಾಗೆ ಕರೆದುಕೊಂಡು ಹೋಗಿರುವ ಯಶ್ ಸಮುದ್ರದ ನಡುವೆ ಐಶಾರಾಮಿ ಬೋಟ್ ನಲ್ಲಿ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು

ಆಚರಿಸಿಕೊಂಡಿದ್ದಾರೆ.. ಹೌದು ಗೋವಾ ರಾಧಿಕಾ ಪಂಡಿತ್ ಅವರ ಅಜ್ಜಿಯ ಊರಾದ ಕಾರಣ ಅವರಿಗೆ ಸಂತೋಷ ನೀಡಲೆಂದು ತಮ್ಮ ಮದುವೆಯ ನಿಶ್ಚಿತಾರ್ಥವನ್ನೂ ಸಹ ಅಲ್ಲಿಯೇ ಆಚರಿಸಿಕೊಂಡಿದ್ದರು.. ಇನ್ನು ಮಗ ಯಥರ್ವ್

ಯಶ್ ನ ಮೊದಲ ಹುಟ್ಟುಹಬ್ಬವನ್ನು ಸಹ ಗೋವಾದಲ್ಲಿಯೇ ಆಚರಿಸಿದ್ದ ಜೋಡಿ ಇದೀಗ ಮಡದಿಗೆ ಗೋವಾದ ಸಮುದ್ರದ ನಡುವೆ ಮದುವೆ ದಿನದ ನೆನಪುಗಳನ್ನು ಮೆಲುಕು ಹಾಕುವ ಸಂಭ್ರಮವನ್ನು ಆಚರಿಸಿ ಸರ್ಪ್ರೈಸ್ ನೀಡಿದ್ದಾರೆ..

ಇನ್ನು ಈ ದಿನದ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ ಯಶ್ ಜೊತೆಗೆ ಫೋಟೋ ತೆಗೆಯಲು ಇಷ್ಟು ಕಷ್ಟ ಪಡಬೇಕಾ ಎಂದು ಕ್ಯಾಪ್ಶನ್ ಹಾಕಿದ್ದಾರೆ.. ಇತ್ತ ಯಶ್ ಅವರೂ ಸಹ ಫೋಟೋ ಹಂಚಿಕೊಂಡು ನೀನು ನನ್ನ ಜೊತೆ

ಇದ್ದಾಗ‌ ಮಾತ್ರ ಈ ಪ್ರಪಂಚ ಇಷ್ಟು ಸುಂದರವಾಗಿ ಕಾಣುತ್ತದೆ.. ನನ್ನ ಪ್ರಪಂಚವನ್ನು ಇಷ್ಟು ಸುಂದರಗೊಳಿಸಿದ್ದಕ್ಕೆ ಧನ್ಯವಾದಗಳು.. ಲವ್ ಯು ಫಾರ್ ಎವರ್ ಅಂಡ್ ಎವರ್ ಎಂದು ಬರೆದು ಮಡದಿಗೆ ಶುಭಾಶಯ ತಿಳಿಸಿದ್ದರು..

Related Articles

Leave a Reply

Your email address will not be published. Required fields are marked *

Back to top button