ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿರುವ ‘ಗಟ್ಟಿಮೇಳ’ ಖ್ಯಾತಿಯ ಆರತಿ ಪಾತ್ರಧಾರಿ ಅಶ್ವಿನಿ
ತೆಲುಗಿನ ‘ನಾಗಭೈರವಿ’ ಧಾರಾವಾಹಿಯಲ್ಲಿ ಅಶ್ವಿನಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಶ್ವಿನಿ ಬಣ್ಣ ಹಚ್ಚಿದ್ದಾರೆ. ಲಾಕ್‌ಡೌನ್‌ಗೂ ಮುನ್ನವೇ ಅವರಿಗೆ ಈ ಆಫರ್ ಬಂದಿತ್ತು. ಹೀಗಾಗಿ ಅವರು 7 ಕೆಜಿ ತೂಕ ಇಳಿಸಿಕೊಂಡು ಸಣ್ಣಗಾಗಿದ್ದಾರೆ. ಇದುವರೆಗೂ ಮಾಡಿರದ ಪಾತ್ರವನ್ನು ‘ನಾಗಭೈರವಿ’ಯಲ್ಲಿ ನಿಭಾಯಿಸುತ್ತಿರೋದರಿಂದ ಈ ಪ್ರಾಜೆಕ್ಟ್ ಅವರ ಬಣ್ಣದ ಬದುಕಿಗೆ ದೊಡ್ಡ ತಿರುವು ನೀಡಲಿದೆ ಎಂಬ ನಿರೀಕ್ಷೆ ಅಶ್ವಿನಿ ಅವರದ್ದು. ಈಗಾಗಲೇ ಈ ಸೀರಿಯಲ್‌ನ ಪ್ರೋಮೋಗಳು ರಿಲೀಸ್ ಆಗಿದ್ದು, ಅಶ್ವಿನಿ ಪಾತ್ರದಿಂದ ಗಮನಸೆಳೆದಿದ್ದಾರೆ. ವಾಹಿನಿ, ಧಾರಾವಾಹಿ ತಂಡ ಅಶ್ವಿನಿಯ ನಟನೆ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆಯಂತೆ. ಈ ಧಾರಾವಾಹಿಯಲ್ಲಿ ಸಾಹಸ ದೃಶ್ಯಗಳಿದ್ದು, ನಟಿ ಅನುಷ್ಕಾ ಶೆಟ್ಟಿಗೆ ಸಾಹಸ ಹೇಳಿಕೊಟ್ಟ ಮಾಸ್ಟರ್, ಅಶ್ವಿನಿಗೆ ಇಲ್ಲಿ ಫೈಟ್ ಹೇಳಿಕೊಟ್ಟಿದ್ದಾರೆ. ಈ ಪಾತ್ರ ತುಂಬ ಪರ್ಫಾಮೆನ್ಸ್ ಬೇಡುವುದರಿಂದ ಅಶ್ವಿನಿ ‘ನಾಗಭೈರವಿ’ ಸೀರಿಯಲ್ ಒಪ್ಪಿಕೊಂಡಿದ್ದಾರೆ.
‘ಗಟ್ಟಿಮೇಳ’ ಹಾಗೂ ‘ನಾಗಭೈರವಿ’ ಎರಡು ಧಾರಾವಾಹಿಗಳನ್ನು ಮಾಡುತ್ತಿರುವುದರಿಂದ ಇನ್ಮುಂದೆ ಅಶ್ವಿನಿ ತಿಂಗಳು ಪೂರ್ತಿ ಬ್ಯುಸಿಯಾಗಿರಲಿದ್ದಾರೆ. ತುಂಬ ಶೇಡ್‌ಗಳಿರುವುದರಿಂದ ಅವರು ಹಾವ-ಭಾವ ಮಾಡುವುದು, ಡಾನ್ಸ್ ಮಾಡುವುದಕ್ಕೆ ತುಂಬ ಒತ್ತು ಕೊಟ್ಟು ಕಲಿಯುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಎಲ್ಲ ಧಾರವಾಹಿಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು. ಅಶ್ವಿನಿ ಕೂಡಾ ತೆಲುಗಿನ ‘ನಾಗ ಭೈರವಿ’ ಧಾರಾವಾಹಿ ರಾಮೀಜಿ ಫಿಲ್ಮ್ಂ ಸಿಟಿಯಲ್ಲಿ ನಡೆಯುವ ಕಾರಣದಿಂದ ಹೈದರಾಬಾದ್ಗೆ ಹೋಗಬೇಕಿತ್ತು. ಆದರೆ ಕೊರೊನಾ ಸುರಕ್ಷತೆ ದೃಷ್ಟಿಯಿಂದ ಅಶ್ವಿನಿ ಈ ಧಾರಾವಾಹಿಯಿಂದ ಹೊರ ಬಂದಿದ್ದರು.