ಉಪಯುಕ್ತ ಮಾಹಿತಿ

ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಮನೆಮದ್ದು!

ಕಿಡ್ನಿ ಸ್ಟೋನ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ವೈದ್ಯರ ಬಳಿ ಹೋದ್ರೆ ಆಪರೇಷನ್ ಮಾಡಬೇಕು ಹಾಗೆ ಹೀಗೆ ಅನ್ನುತ್ತಾರೆ, ಆದ್ರೆ ಯಾವುದೇ ಆಪರೇಷನ್ ಇಲ್ಲದೆ ಕಿಡ್ನಿಯಲ್ಲಿನ ಕಲ್ಲು ಕರಗಿಸಿಕೊಳ್ಳಲು ಬಾಳೆದಿಂಡು ಹೆಚ್ಚು ಸಹಕಾರಿಯಾಗಿದೆ.

ಈ ಮನೆಮದ್ದು ಕಿಡ್ನಿಯಲ್ಲಿ ಕಲ್ಲುಕರಗಿಸಲು ಪ್ರಥಮ ಹಂತದಲ್ಲಿದ್ದರೆ ಇದನ್ನು ಮಾಡುವುದು ಒಳ್ಳೆಯದು. ಸಮಸ್ಯೆ ಮಿತಿ ಮೀರಿದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಬನ್ನಿ ಮನೆಯಲ್ಲೇ ಬಾಳೆದಿಂಡಿನ ರಸವನ್ನು ಹೇಗೆ ತಯಾರಿಸಿ ಅದರ ಬಳಕೆ ಯಾವ ರೀತಿಯಲ್ಲಿ ಮಾಡಿಕೊಳ್ಳಬಹುದು ಅನ್ನೋದನ್ನ ತಿಳಿಸುತ್ತವೆ.

ಬಲಿತ ಬಾಳೆದಿಂಡನ್ನು ತಗೆದುಕೊಂಡು ಅದರ ಒಳಭಾಗದಲ್ಲಿರುವಂತ ಬಿಳಿ ಭಾಗವನ್ನು ಕಟ್ ಮಾಡಿಕೊಂಡು ಅದನ್ನು ಚನ್ನಾಗಿ ಚಿಕ್ಕದಾಗಿ ಕಟ್ ಮಾಡಿ ರಸ ತಯಾರಿಸಿ ಕೊಳ್ಳಬೇಕು. ನಂತರ ಒಂದು ಗ್ಲಾಸ್ ನಲ್ಲಿ ಹಾಕಿ ಬಾಳೆದಿಂಡಿನ ರಸದಲ್ಲಿ ಒಂದೆರಡು ಏಲಕ್ಕಿ ಹಾಕಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಸೇವಿಸಬೇಕು.

ಇದನ್ನು ಪ್ರತಿದಿನ ನಿಮಗೆ ಬಾಯಾರಿಸಿದಾಗ ಅಥವಾ ದಿನಕ್ಕೆ ಮೂರೂ ನಾಲ್ಕು ಬಾರಿಯಾದರೂ ಸೇವಿಸಬೇಕು. ಹೀಗೆ ಸೇವಿಸುವುದರಿಂದ ದೇಹಕ್ಕೆ ತಂಪು ನೀಡುವಂತ ಬಾಳೆದಿಂಡಿನ ಜ್ಯುಸ್ ಕಿಡ್ನಿಯಲ್ಲಿರುವಂತ ಕಲ್ಲುಗಳನ್ನು ಬಹುಬೇಗನೆ ಕರಗಿಸುತ್ತದೆ.

ಬಾಳೆದಿಂಡಿನ ಜ್ಯುಸ್ ಅನ್ನು ಮೊಸರಿನಲ್ಲಿ ಕೂಡ ಹಾಕಿ ಸೇವಿಸಬಹುದಾಗಿದೆ. ಒಟ್ಟಾರೆಯಾಗಿ ಬಾಳೆದಿಂಡು ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಸಹಕಾರಿ ಆಗಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳುವುದು ಉತ್ತಮ. ನಿಮ್ಮ ಸ್ನೇಹಿತರಿಗೂ ಕೂಡ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಪ್ರತಿದಿನ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನಮ್ಮಲ್ಲಿ ತಿಳಿಯಲು ಮರೆಯದೆ ನಮ್ಮಪುಟವನ್ನು ಲೈಕ್ ಮಾಡಿಕೊಳ್ಳಿ ಧನ್ಯವಾದಗಳು

Related Articles

Leave a Reply

Your email address will not be published. Required fields are marked *

Back to top button