ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ಈಕೆ ಎಂದಿಗೂ ಸೀರಿಯಲ್ ಬಿಡುವ ಮಾತೇ ಇಲ್ಲವಂತೆ
ಧಾರಾವಾಹಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅನೇಕರು ಇಂದು ಕೇವಲ ಧಾರಾವಾಹಿ ಮಾತ್ರವಲ್ಲದೇ ಸಿನಿಮಾರಂಗದಲ್ಲಿಯೂ ತಮ್ಮ ನಟನಾ ಛಾಪನ್ನು ಮೂಡಿಸಿದ್ದಾರೆ. ರಾಧಿಕಾ ಪಂಡಿತ್ ರಚಿತಾ ರಾಮ್, ಅದಿತಿ ಪ್ರಭುದೇವ ಹೀಗೆ ಸೀರಿಯಲ್ ನಿಂದ ಬಣ್ಣದ ಪಯಣ ಶುರು ಮಾಡಿರುವ ಅನೇಕರು ಇಂದು ಹಿರಿತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಮೋಕ್ಷಿತಾ ಪೈ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪಾರುವಿನಲ್ಲಿ ನಾಯಕಿ ಪಾರು ಆಗಿ ಅಭಿನಯಿಸುತ್ತಿರುವ ಮಂಗಳೂರಿನ ಚೆಲುವೆ ಇದೀಗ ಹಿರಿತೆರೆಗೂ ಕಾಲಿಟ್ಟಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಇನ್ನು ಹೆಸರಿಡದ ಸಿನಿಮಾಕ್ಕೆ ನಾಯಕಿಯಾಗಿ ಮೋಕ್ಷಿತಾ ನಟಿಸಲಿದ್ದಾರೆ. ಇಷ್ಟು ದಿನ ಪಾರು ಆಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಮೋಕ್ಷಿತಾ ಇದೀಗ ಬೆಳ್ಳಿತೆರೆಯತ್ತ ಮುಖ ಮಾಡಿದ್ದಾರೆ.ನಾನು ಇಂದು ನಟನಾ ಲೋಕದಲ್ಲಿ ಜನಪ್ರಿಯವಾಗಿದ್ದೇನೆ ಎಂದರೆ ಅದಕ್ಕೆ ಪಾರು ಧಾರಾವಾಹಿಯೇ ಮುಖ್ಯ ಕಾರಣ. ನಾನಿಂದು ಎತ್ತ ಹೋದರೂ ಜನ ನನ್ನನ್ನು ಪಾರು ಎಂದೇ ಗುರುತಿಸುತ್ತಾರೆ. ಮೊದಲ ಧಾರಾವಾಹಿಯಲ್ಲಿಯೇ ನಾನು ಇಷ್ಟೊಂದು ಯಶಸ್ಸು ದೊರೆಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಜನರು ತೋರಿಸುವ ಪ್ರೀತಿಗೆ ನಾನು ಬೆರಗಾಗಿದ್ದೇನೆ. ಇದು ನನ್ನ ಬಣ್ಣದ ಬದುಕಿನಲ್ಲಿ ದೊರೆತ ಬಹುದೊಡ್ಡ ಉಡುಗೊರೆ. ಹಲವರಿಗೆ ನನ್ನ ನಿಜವಾದ ಹೆಸರು ಮೋಕ್ಷಿತಾ ಎಂಬುದು ಹಲವರಿಗೆ ತಿಳಿದಿಲ್ಲ.
ಮೋಕ್ಷಿತಾ ಪೈ ಒಬ್ಬ ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಶೋಬಿಜ್ ಉದ್ಯಮದಲ್ಲಿ ಕೆಲಸ ಮಾಡುತ್ತಾಳೆ. 2019 ೀ ಕನ್ನಡದಲ್ಲಿ ಪ್ರಸಾರವಾದ ಪರು ಕನ್ನಡ ಧಾರಾವಾಹಿ ಮೂಲಕ ಅವರು 2019 ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ಶೀರ್ಷಿಕೆ ಪಾತ್ರವನ್ನು ನಿರ್ವಹಿಸಿದರು. ಅಕ್ಟೋಬರ್ 22, 1995 ರಂದು ಜನಿಸಿದ ಮೋಕ್ಷಿತಾ ಭಾರತದ ಕರ್ನಾಟಕದ ಮಂಗಳೂರು ಮೂಲದವರು. 2021 ರಂತೆ, ಮೋಕ್ಷಿತಾ ಪೈ ಅವರ ವಯಸ್ಸು 25 ವರ್ಷಗಳು.