NEWS

ಪದವೀಧರರಿಗೆ ಗುಡ್ ನ್ಯೂಸ್; ಇನ್​ಫೋಸಿಸ್​ ಕಂಪನಿಯಲ್ಲಿದೆ 35,000 ಉದ್ಯೋಗಾವಕಾಶ

ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿ ಈಗಾಗಲೇ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳೂ ಸರಿಯಾಗಿ ನಡೆಯದ ಕಾರಣದಿಂದ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಹೀಗಾಗಿ, ಇದೀಗ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಿಂದ ಹೊರಬರುತ್ತಿರುವ ಬ್ಯಾಚ್​ನವರಿಗೆ ಉದ್ಯೋಗ ಹುಡುಕುವುದೇ ದೊಡ್ಡ ಸವಾಲಾಗಿದೆ. ನೀವೇನಾದರೂ ಆ ರೀತಿ ಉದ್ಯೋಗ ಹುಡುಕುತ್ತಾ ಭವಿಷ್ಯದ ಚಿಂತೆಯಲ್ಲಿದ್ದರೆ ನಿಮಗಿಲ್ಲಿದೆ ಗುಡ್ ನ್ಯೂಸ್!

ಭಾರತದ ಪ್ರಮುಖ ಐಟಿ ಕಂಪನಿಯಾದ ಇನ್​ಫೋಸಿಸ್​ನಲ್ಲಿ (Infosys)ಕೆಲಸ ಮಾಡಬೇಕೆಂಬುದು ಬಹುತೇಕರ ಆಸೆ. ನಿಮಗೂ ಇನ್​ಫೋಸಿಸ್​ನಲ್ಲಿ ಕೆಲಸ ಮಾಡುವ ಬಯಕೆಯಿದ್ದರೆ ಖಂಡಿತ ಪ್ರಯತ್ನ ಮಾಡಬಹುದು. ಏಕೆಂದರೆ ಇನ್​ಫೋಸಿಸ್​ ಸದ್ಯದಲ್ಲೇ 35,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಲಾಕ್​ಡೌನ್​ನಿಂದ ಹಲವು ಕಂಪನಿಗಳು ನಷ್ಟದಲ್ಲಿದ್ದರೆ ಇನ್​ಫೋಸಿಸ್ ಲಿಮಿಟೆಡ್ ಮಾತ್ರ ಭಾರೀ ಲಾಭ ಕಂಡಿದೆ. ಇನ್​ಫೋಸಿಸ್​ ಸಂಸ್ಥೆಯ ಲಾಭದಲ್ಲಿ ಶೇ. 22.7ರಷ್ಟು ಹೆಚ್ಚಳವಾಗಿದ್ದು, ಈ ವರ್ಷ ಇನ್ನೂ ಸಾಕಷ್ಟು ಪ್ರಾಜೆಕ್ಟ್​ಗಳು ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮತ್ತೆ 35 ಸಾವಿರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.

ಬೆಂಗಳೂರು ಮೂಲದ ಐಟಿ ಕಂಪನಿಯಾದ ಇನ್​ಫೋಸಿಸ್ ಮೊದಲ ಕ್ವಾರ್ಟರ್ ಅವಧಿಯಲ್ಲಿ 5,195 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ 4,233 ಕೋಟಿ ರೂ. ಆದಾಯ ಗಳಿಸಿತ್ತು. 2022ರ ಆರ್ಥಿಕ ವರ್ಷದ ವೇಳೆಗೆ ಇನ್​ಫೋಸಿಸ್ ಶೇ. 14ರಿಂದ 16ರಷ್ಟು ಆದಾಯದ ನಿರೀಕ್ಷೆಯಲ್ಲಿದೆ. ಇನ್​ಫೋಸಿಸ್ ಸಂಸ್ಥೆಯ ಈ ಸಾಧನೆ ಬಗ್ಗೆ ಮಾತನಾಡಿರುವ ಭಾರತದ ಎರಡನೇ ಐಟಿ ಸರ್ವಿಸ್ ಸಂಸ್ಥೆಯಾಗಿರುವ ಇನ್​ಫೋಸಿಸ್ ಡಿಜಿಟಲ್ ವಲಯಕ್ಕೆ ವಿಶ್ವಾದ್ಯಂತ ಮತ್ತಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಇದಕ್ಕೂ ಮೊದಲು ಟಿಸಿಎಸ್ (TCS) ಕೂಡ 40,000 ಪ್ರೆಷರ್​ಗಳನ್ನು ಕಾಲೇಜಿನ ಕ್ಯಾಂಪಸ್​ಗಳಿಂದಲೇ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಇನ್​ಫೋಸಿಸ್ ಕೂಡ ಪದವೀಧರರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದ್ದು, ಇದರಿಂದ ಸಾವಿರಾರು ಜನರ ಉದ್ಯೋಗದ ಸಮಸ್ಯೆ ದೂರವಾಗಲಿದೆ.

Related Articles

2 Comments

  1. Hi my name is Anitha from Bangalore I have done my BBM in government college. I am searching for a job, I have 2 years 6 months of experience in bpo(concentrix daksh private limited)

Leave a Reply

Your email address will not be published.

Back to top button

You cannot copy content of this page