NEWS

ಬಿಗ್ ಬಾಸ್ ನಿಂದ ಹೊರ ಬಂದ ರಘುಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ..

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಸೀಸನ್ ನಿಂದ ಎರಡನೇ ಸ್ಪರ್ಧಿ ಮನೆಯಿಂದ ಹೊರ ಬಂದಾಗಿದೆ.. ಹೌದು ರಘು ಗೌಡ ತಮ್ಮ ಎಂಭತ್ತೇಳು ದಿನದ ಬಿಗ್ ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ.. ಆದರೆ ರಘುಗೆ ನಿಜಕ್ಕೂ ಸಿಕ್ಕ ಸಂಭಾವನೆಯಾದರೂ ಎಷ್ಟು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.. ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಾಕಷ್ಟು ಬೇರೆ ಬೇರೆ ರಂಗದವರಿಗೆ ಅವಕಾಶ ನೀಡಲಾಗಿತ್ತು‌.‌ ಅದೇ ರೀತಿ ಕಳೆದ ಲಾಕ್ ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಭಿನ್ನ ಕಾಮಿಡಿ ವೀಡಿಯೋಗಳ ಮೂಲಕ ಖ್ಯಾತಿ ಗಳಿಸಿದ್ದ ರಘು ಬಿಗ್ ಬಾಸ್ ಸೀಸನ್ ಎಂಟಕ್ಕೆ ಆಯ್ಕೆಯಾದರು..

ರಘು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ರಘುಗೆ ಬೆಂಬಲ ಸೂಚಿಸಿದ್ದರು.. ಸಾಮಾಜಿಕ ಜಾಲತಾಣದಿಂದ ಬೆಳಕಿಗೆ ಬಂದ ಪ್ರತಿಭೆಗೆ ಅವಕಾಶ ಸಿಕ್ಕಿದೆ ಎಂದು ಸಂತೋಷ ಪಟ್ಟಿದ್ದರು.. ರಘುವಿನಿಂದ ಸಾಕಷ್ಟು ಮನರಂಜನೆಯ ನಿರೀಕ್ಷೆಯಲ್ಲಿದ್ದರು.. ಆದರೆ ಅದೆಲ್ಲವೂ ಸುಳ್ಳಾಯಿತು.. ಸಾಮಾಜಿಕ ಜಾಆಲತಾಣಗಳಲ್ಲಿ ವೀಡಿಯೋ ಮೂಲಕಮ ಜನರ ಮನಗೆದ್ದಿದ್ದ ರಘು ಅವರು ಬಿಗ್‌ ಬಾಸ್‌ ಮನೆಯಲ್ಲಿ ಜನರನ್ನು ಮನರಂಜಿಸುವಲ್ಲಿ ಸೋತರು. ಸದಾ ತಮ್ಮ ಸಪ್ಪೆ ಮುಖದಿಂದ ಜನರಿಗೆ ಕಿರಿಕಿರಿ ತಂದದ್ದೂ ಉಂಟು.. ಜನರಿಗೆ ಮಾತ್ರವಲ್ಲ ಖುದ್ದು ರಘು ಅವರ ಪತ್ನಿ ಕೂಡ ರಘು ತಾಆನು ತಾನಾಗಿಲ್ಲ ಎಂದು ರಘುವಿನ ನಡವಳಿಕೆ ನೋಡಿ ತಿಳಿಸಿದ್ದರು..

ಹೌದು ಬಿಗ್ ಬಾಸ್ ಮನೆಯಲ್ಲಿ ರಘು ಪ್ರೇಕ್ಷಕರು ಹಾಗೂ ವಾಹಿನಿಯವರು ನಿರೀಕ್ಷೆ ಮಾಡಿದಷ್ಟು ಮನರಂಜನೆ ನೀಡಲಿಲ್ಲ.. ಜೊತೆಗೆ ಸಂಪೂರ್ಣವಾಗಿ ಓಪನ್ ಅಪ್ ಕೂಡ ಆಗದೇ ಸಪ್ಪೆ ಮುಖದಲ್ಲಿಯೇ ಬಹಳಷ್ಟು ದಿನಗಳನ್ನು ಕಳೆದರು‌.. ಜೊತೆಗೆ ರಘು ಅವರ ನಿರಾಶೆಯ ಮುಖ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿತ್ತು‌‌.. ಇನ್ನು ಬಿಗ್ ಬಾಸ್ ನಲ್ಲಿ ಹೇಗೋ ಎಪ್ಪತ್ತು ದಿನಗಳ ಜರ್ನಿ ಮುಗಿಸಿದ ರಘು ಬಿಗ್ ಬಾಸ್ ರದ್ದಾದ ನಂತರ ಮನೆಯಿಂದ ಹೊರ ಬಂದರು.. ಆ ಬಳಿಕ ತಮ್ಮ ಬಿಗ್ ಬಾಸ್ ಜರ್ನಿಯನ್ನು ನೋಡಿದ ರಘು ತಾವು ನಡೆದುಕೊಂಡ ರೀತಿಯ ಬಗ್ಗೆ ಅವಲೋಕಿಸಿಕೊಂಡರು.. ಮಾಡಿದ ತಪ್ಪುಗಳ ಬಗ್ಗೆ ತಿಳಿದರು.. ಅಷ್ಟರಲ್ಲಿಯೇ ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಯಿತು.‌. ತಮ್ಮಲ್ಲಿರುವ ಪ್ರತಿಭೆಯನ್ನು ಬಿಗ್ ಬಾಸ್ ಮನೆಯಲ್ಲಿ ತೋರಲು ಮತ್ತೊಂದು ಅವಕಾಶ ದೊರೆಯಿತು..

ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದ ರಘು ನಾನು ಸಂಪೂರ್ಣವಾಗಿ ಬದಲಾಗುವೆ ಎಂದು ಸುದೀಪ್ ಅವರಿಗೆ ತಿಳಿಸಿ ಮನೆ ಒಳ ಬಂದರು.. ಮನೆಯಲ್ಲಿ ನಡೆದ ಮಾತುಗಳಲ್ಲಿ ಹಾಗೂ ಜಗಳಗಳಲ್ಲಿ ಕೊಂಚ ಹೆಚ್ಚಾಗಿ ಕಾಣಿಸಿಕೊಂಡದ್ದು ಬಿಟ್ಟರೆ ಮತ್ತೆ ನಿರೀಕ್ಷೆ ಮಾಡಿದಷ್ಟು ಮನರಂಜನೆ ರಘು ಅವರಿಂದ ದೊರೆಯಲಿಲ್ಲ.. ಇನ್ನು ಎರಡನೇ ಇನ್ನಿಂಗ್ಸ್ ಶುರುವಾಗಿ ಹದಿನೇಳು ದಿನಗಳು ಕಳೆದರೂ ರಘುವಿನಿಂದ ಮನರಂಜನೆ ವಿಚಾರವಾಗು ಯಾವುದೇ ಉಪಯೋಗವಿಲ್ಲದ ಕಾರಣ ಅವರಿಗೆ ಕಡಿಮೆ ವೋಟಿಂಗ್ ಬಿದ್ದು ಮನೆಯಿಂದ ಎಲಿಮಿನೇಟ್ ಮಾಡಲಾಯಿತು.. ಇನ್ನುಳಿದಂತೆ ಅರವಿಂದ್ ಕೆಪಿ ದಿವ್ಯಾ ಉರುಡುಗ ಶಮಂತ್ ಪ್ರಿಯಾಂಕ ಶುಭಾ ಪೂಂಜಾ ವೈಷ್ಣವಿ ಚಕ್ರವರ್ತಿ ಚಂದ್ರಚೂಡ ಪ್ರಶಾಂತ್ ಸಂಬರ್ಗಿ ಮಂಜು ಪಾವಗಡ ದಿವ್ಯಾ ಸುರೇಶ್ ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಂದುವರೆಸಿದ್ದು ಫಿನಾಲೆಗೆ ಕಾಲಿಡಲು ಕಾತುರರಾಗಿದ್ದಾರೆ..

ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ಬಿಗ್ ಬಾಸ್ ನಿಂದ ಹೊರ ಬಂದ ರಘು ಅವರಿಗೆ ಕೈ ತುಂಬಾ ಸಂಭಾವನೆ ದೊರೆತಿದೆ.. ಹೌದು ಬಿಗ್ ಬಾಸ್ ವಾಡಿಕೆಯಂತೆ ರಘು ಅವರಿಗೂ ಸಹ ವಾರದ ಸಂಭಾವನೆ ನಿಗಧಿಯಾಗಿತ್ತು.. ಎಷ್ಟು ವಾರಗಳು ಬಿಗ್ ಬಾಸ್ ಮನೆಯಲ್ಲಿ ಉಳಿಯುವರೋ ಅಷ್ಟು ವಾರಗಳ ಸಂಭಾವನೆ ನೀಡಲಾಗುವುದು ಎಂದು ತಿಳಿಸಲಾಗಿತ್ತು.. ಅದರಂತೆ ರಘು ಅವರಿಗೆ ಒಂದು ವಾರಕ್ಕೆ ಇಪ್ಪತ್ತೈದು ಸಾವಿರ ರೂಪಾಯಿ ಸಂಭಾವನೆ ನಿಗಧಿ ಮಾಡಲಾಗಿತ್ತು.. ಅದರಂತೆಯೇ ರಘು ಅವರಿಗೆ ಒಟ್ಟು ಹದಿಮೂರು ವಾರಗಳಿಗೆ ಮೂರು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಸಂಭಾವಮೆ ರಘು ಅವರ ಕೈ ಸೇರಲಾಗಿದೆ ಎಂದು ತಿಳಿದು ಬಂದಿದೆ.. ಒಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಇನ್ನೂ ಚೆನ್ನಾಗಿ ಬಳಸಿಕೊಂಡಿದ್ದರೆ ಫಿನಾಲೆಯ ಐದು ಸ್ಪರ್ಧಿಗಳಲ್ಲಿ ರಘು ಸಹ ಒಬ್ಬರಾಗಬಹುದಿತ್ತು ಎಂಬ ಮಾತು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿರೋದು ಸತ್ಯ..

Related Articles

Leave a Reply

Your email address will not be published. Required fields are marked *

Back to top button