NEWS

ಕಾಂಗ್ರೆಸ್ ಭವನದಲ್ಲಿದ್ದ ಎಸ್​.ಎಂ ಕೃಷ್ಣ ಫೋಟೋಗೆ ಅವಮಾನ

ಮಾಜಿ ಸಿಎಂ ಎಸ್​.ಎಂ ಕೃಷ್ಣ ಕಾಂಗ್ರೆಸ್​ನಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅಲಂಕರಿಸಿದ್ದರು. ಇತ್ತೀಚಿಗೆ ಪಕ್ಷಕ್ಕೆ ಗುಡ್​ ಬೈ ಹೇಳಿ ಬಿಜೆಪಿ ಸೇರಿದ್ದರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿದ್ದ ಎಸ್​.ಎಂ ಕೃಷ್ಣ ಅವರ ಫೋಟೋವನ್ನು ಕೈ ಕಾರ್ಯಕರ್ತರು ಹರಿದು ಹಾಕಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ರಾಹುಲ್​ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ನಾಯಕ ಫೋಟೋ ಹಾಕಲಾಗಿತ್ತು. ಆದರೆ ಎಸ್.ಎಂ ಕೃಷ್ಣ ಅವರ ಪೋಟೋವನ್ನು ಮಾತ್ರ ಕಾರ್ಯಕರ್ತರು ಹರಿದು ಹಾಕದ್ದಾರೆ.

ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್​ ಭವನಕ್ಕೆ ಬರುವ ವೇಳೆ ಪೋಟೋ ಸರಿಪಡಿಸಲಾಗಿತ್ತು. ಆದರೆ ಅವರು ತೆರಳಿದ ಬಳಿಕ ಮತ್ತೆ ಕೈ ಕಾರ್ಯಕರ್ತರು ಪೋಟೋ ಹರಿದು ಹಾಕಿದ್ದಾರೆ ಎನ್ನಲಾಗಿದೆ. ನಿನ್ನೆ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ರಕ್ಷಾ ರಾಮಯ್ಯ ನಿನ್ನೆ ಭೇಟಿ ವೇಳೆ ಎಸ್.ಎಂ ಕೃಷ್ಣ ಫೋಟೋ ಹರಿದ ಸ್ಥಿತಿಯಲ್ಲಿ ಕಂಡು ಬಂದಿದೆ.

ಇನ್ನು ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು ಕಾಂಗ್ರೆಸ್​ನಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅಲಂಕರಿದ್ದರು. ಇತ್ತೀಚಿಗೆ ಕಾಂಗ್ರೆಸ್​ಗೆ ಗುಡ್​ ಬೈ ಹೇಳಿ ಬಿಜೆಪಿ ಸೇರಿದ್ದರು.

Related Articles

Leave a Reply

Your email address will not be published. Required fields are marked *

Back to top button