NEWS
CM ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ-ರೇಣುಕಾಚಾರ್ಯ
ಸಿಎಂ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಒಬ್ಬಿಬ್ಬರಿಂದ ಸಿಎಂ ಬದಲಾವಣೆ ಮಾಡಲಾಗಲ್ಲ. ಯಡಿಯೂರಪ್ಪ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ, ಶಾಸಕರ ಒಪ್ಪಿಗೆ ಮೇಲೆ ಸಿಎಂ ಆಗಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಂದುವರೆಯುತ್ತಾರೆ, ಇಲ್ಲ ಅಂತ ಹೇಳೋಕೆ ನಾನ್ಯಾರು. ಜನಾದೇಶ ಅವರಪರವಿದೆ ಎಂದರು.
ನಾವು ಕೆಲವು ಶಾಸಕರು ದೆಹಲಿಗೆ ಹೋಗ್ತೇವೆ. ಲೋಕಸಭೆ ಅಧಿವೇಶನ ಪ್ರಾರಂಭವಾಗ್ತಿದೆ. ಈಗಾಗಲೇ ಐವರು ಶಾಸಕರ ಜೊತೆ ಮಾತನಾಡಿದ್ದೇನೆ. ಜುಲೈ 22ರಂದು ದೆಹಲಿಗೆ ಹೋಗ್ತೇವೆ. ಬೆಂಗಳೂರಲ್ಲಿ ಕೂತು ರಾಜಕಾರಣ ಮಾಡಿದ್ರೆ ಆಗಲ್ಲ ಎಂದರು.