Uncategorized

ಭಿಕ್ಷೆ ಕೇಳಿದ ಭಿಕ್ಷುಕನಿಗೆ ಮಹಿಳೆ ಮಾಡಿದ್ದೇನು ?? ನೋಡಿ ಅದ್ಭುತವಾದ ಈ ಸ್ಟೋರಿ

ವಯಸ್ಸಾದ ಅಜ್ಜ ಪ್ರತಿದಿನ ಭಿಕ್ಷೆಬೇಡಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದ . ಒಂದು ದಿನ ದೇವಾಲಯದ ಮುಂದೆ ಭಿಕ್ಷೆ ಬೇಡಲು ಕುಳಿತಿದ್ದ ಅಲ್ಲಿ ಒಬ್ಬ ಮಹಿಳೆಯನ್ನು ಬಂದಳು ಅವಳ ಹೆಸರು ಆಶಾ. ಅಜ್ಜ ಪ್ರತಿದಿನ ಕೆಲವರು ಕೊಡುತ್ತಿದ್ದ ಊಟವನ್ನು ಪಡೆದುಕೊಂಡು ತಿನ್ನುತ್ತಿದ್ದರು. ಒಂದು ದಿನ ಅಜ್ಜ ಹೊಟೇಲ್ ಬಳಿ ಹೋಗಿ ಊಟ ಕೇಳಿದ. ಅಲ್ಲಿದ್ದ ಮಾಲಿಕ ತಮ್ಮ ಕೆಲಸಗಾರನಿಗೆ ಆ ಅಜ್ಜನಿಗೆ ಊಟ ಕೊಟ್ಟು ಕಳಿಸು ಎಂದು ಹೇಳಿದರು. ಆಗ ಆತ ಆ ಅಜ್ಜನಿಗೆ ಊಟ ಕೊಟ್ಟ .

ಆಮೇಲೆ ಅಜ್ಜ ಅದೇ ಹೋಟೆಲ್ ಮುಂದೆ ಮರದ ಕೆಳಗೆ ಕುಳಿತು ಊಟ ಮಾಡಲು ಶುರು ಮಾಡಿದ. ಊಟವಾದ ನಂತರ ಅದೇ ಮರದ ಕೆಳಗೆ ವಿಶ್ರಾಂತಿ ಪಡೆಯಲು ಕುಳಿತಿದ್ದರು . ಅಲ್ಲಿ ಆಶಾ ಎಂಬ ಮಹಿಳೆ ದಾರಿಯಲ್ಲಿ ಹೋಗಯತ್ತಿದ್ದಳು . ಅವಳನ್ನು ಕಂಡು ಅಜ್ಜ ಬಿಕ್ಷೆ ಕೆಳಿದ. ಆಶಾಳು ಆ ಅಜ್ಜ ಕೈಯಲ್ಲಿ ಹಿಡಿದಿದ್ದ ತಟ್ಟೆ ನೋಡಲು ಆರಂಬಿಸಿದಳು. ಅವಾಗ ಆ ಅಜ್ಜ ಆ ತಟ್ಟೆಯನ್ನು ತನ್ನ ಅಜ್ಜ ಹಿಂದಿನ ಕಾಲದಲ್ಲಿ ಕೊಟ್ಟಿದ್ದು ಅದೇ ಒಂದೆ ತಟ್ಟೆ ಇದ್ದು ಅದರಿಂದ ಬಿಕ್ಷೆ ಬೇಡಿತ್ತಿದ್ದೆನೆ ಎಂದು ಹೇಳಿದ. ಆತ ತನ್ನ ತಂದೆ ತಾಯಿ ಹಾಗೂ ಕುಟುಂಬ ಯಾರನ್ನು ನೋಡಿಲ್ಲ ಎಂದು ಹೇಳಿದ..

ಆ ತಟ್ಟೆ ಕಪ್ಪು ಆಗಿತ್ತು. ಆಗ ಅವಳು ಆ ತಟ್ಟೆಯನ್ನು ಒಂದು ಚಾಕುವಿನಿಂದ ಉಜ್ಜಿ ನೋಡಿದಳು.. ಆ ತಟ್ಟೆ ಪಳಪಳ ಹೊಳೆಯಲಾರಂಬಿಸಿತು.. ಬಹು ಬೆಲೆಬಾಳುವ ವಜ್ರದ ತಟ್ಟೆ ಅದಾಗಿತ್ತು. ಆವಾಗ ಆ ಮಹಿಳೆ ಆ ಅಜ್ಜನಿಗೆ ಇದನ್ನು ತಿಳಿಸಿ ಆತನಿಗೆ ಆ ತಟ್ಟೆಯನ್ನು ಮಾರಿ ಕನಿಷ್ಟಮಟ್ಟದ ಜೀವನ ಆರಂಭಿಸಲು ಸಹಾಯ ಮಾಡಿದಳು. ಸ್ನೇಹಿತರೆ ಈ ಕಥೆಯನ್ನು ನಿಮಗೆ ಯಾಕೆ ಹೇಳುತ್ತಿದ್ದೆವೆ ಎಂದರೆ ಜೀವನದಲ್ಲಿ ಇದ್ದಿದ್ದರಲ್ಲಿಯೇ ಅವಕಾಶ ಹುಡುಕಿ ಒಳ್ಳೆಯ ಜೀವನ ನಡೆಸಬೇಕು.. ಕೆಲವರು ಅವಕಾಶ ಇದ್ದರು ಸಹ ಆಲಸ್ಯತನದಿಂದ ಯಾವುದೇ ಕೆಲಸ ಮಾಡುವುದಿಲ್ಲ. ಆದರೇ ಕೆಲವರು ಇದ್ದದನ್ನು ಉಪಯೋಗಿಸಿ ಅದ್ಭುತ ಸಾಧನೆ ಮಾಡುತ್ತಾರೆ. ಈ ಕಥೆ ಇಷ್ಟವಾದರೆ ಕಮೆಂಟ ಮಾಡಿ ತಿಳಿಸಿ . ನಿಮ್ಮ ಗೆಳೆಯರಿಗೆ ಶೇರ್ ಮಾಡಿ.. ಧನ್ಯವಾದಗಳು..

Related Articles

Leave a Reply

Your email address will not be published. Required fields are marked *

Back to top button