ರಾತ್ರಿ ತಲೆ ಕೆಳಗೆ ಒಂದು ರೂಪಾಯಿ ನಾಣ್ಯ ತಲೆ ಕೆಳಗೆ ಇಟ್ಟು ಮಲಗುವುದರಿಂದ ಏನಾಗುತ್ತೆ ಗೊತ್ತಾ ?? ನೋಡಿ
ಕೆಲವೊಮ್ಮೆ ನಮ್ಮಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಸಹ ಸೋಲನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಕೆಲವೊಮ್ಮೆ ನಮ್ಮ ಕುಂಡಲಿಯಲ್ಲಿನ ಗ್ರಹಸ್ಥಿತಿಗಳು ಇದಕ್ಕೆ ಕಾರಣವಾಗಿರುತ್ತದೆ.ಒಬ್ಬ ವ್ಯಕ್ತಿಯ ಜನ್ಮದಿಂದಲೇ ಆ ವ್ಯಕ್ತಿಯ ಕುಂಡಲಿಯ 1 ಗ್ರಹದ ಪ್ರಭಾವ ಅತ್ಯಂತ ಶಕ್ತಿಶಾಲಿಯಾಗಿರುತ್ತದೆ.ಅದು ಮತ್ತೊಂದು ಗ್ರಹದೊಂದಿಗೆ ಸೇರಿ ನಮಗೆ ಶುಭ ಅಥವಾ ಅಶುಭ ಫಲವನ್ನು ನೀಡುತ್ತದೆ.
ಹಿರಿಯರ ಒಂದು ಮಾತಿದೆ ಯಾವ ಸ್ಥಳದಲ್ಲಿ ಸಮಸ್ಯೆ ಇರುತ್ತದೆಯೋ ಅದೇ ಸ್ಥಳದಲ್ಲಿ ಆ ಸಮಸ್ಯೆಗೆ ಪರಿಹಾರ ಕೂಡ ಇರುತ್ತದೆ ಎಂದು ಹೇಳಲಾಗುತ್ತದೆ.ಇನ್ನೂ ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಕುಂಡಲಿಯಲ್ಲಿ ಯಾವುದೇ ರೀತಿಯ ಗ್ರಹಗಳ ದೋಷ ಇದ್ದರೆ ಅದನ್ನು ಸರಳ ಪರಿಹಾರಗಳ ಮಾಡುವ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.ಇನ್ನು ಇಂದಿನ ನಮ್ಮ ಲೇಖನದಲ್ಲಿ ತಲೆ ದಿಂಬನ್ನು ಉಪಯೋಗಿಸಿಕೊಂಡು ನಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.
ತಲೆದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟುಕೊಂಡು ಮಲಗುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು.ಇನ್ನೂ ಯಾವ ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು ಎಂದು ತಿಳಿಯೋಣ ಬನ್ನಿ.ತುಳಸಿ ಎಲೆಗಳನ್ನು ನಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನೆಮ್ಮದಿಯ ನಿದ್ದೆ ಬರುತ್ತದೆ ಹಾಗೂ ಕೆಟ್ಟ ಕನಸುಗಳು ಬೀಳುವುದಿಲ್ಲ
ಹಾಗೂ ಭಯ ನಿವಾರಣೆಯಾಗುತ್ತದೆ.ಇನ್ನು ಈ ರೀತಿ ತುಳಸಿ ಎಲೆಗಳನ್ನು 21 ದಿನಗಳ ವರೆಗೂ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ನಮ್ಮ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.
ಪ್ರತಿದಿನ ಮಲಗುವ ಮುನ್ನ ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟುಕೊಂಡು ಮಲಗುವುದರಿಂದ ಹಾಗೂ ಬೆಳಿಗ್ಗೆ ಎದ್ದ ತಕ್ಷಣ ನವಿಲುಗರಿಯನ್ನು ನೋಡುವುದರಿಂದ ಕುಂಡಲಿಯಲ್ಲಿನ ದೋಷಗಳು ನಿವಾರಣೆಯಾಗುತ್ತವೆ ಹಾಗೂ ಬಹುತೇಕ ಕೆಲಸಗಳಲ್ಲಿ ಜಯ ದೊರೆಯುತ್ತದೆ.ಯಾವುದಾದರೂ ದೇವರ ಫೋಟೋ ಅಥವಾ ಧಾರ್ಮಿಕ ಪುಸ್ತಕಗಳು ಅಥವಾ ಪೂಜೆಯಲ್ಲಿ ಬಳಸಿದ ಅಕ್ಷತೆಗಳೂ ಅಥವಾ ಕುಂಕುಮ ಅರಿಶಿನ ಅಥವಾ ಉಪ್ಪು ಇತ್ಯಾದಿ ವಸ್ತುಗಳು.ಈ ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ದೇವರ ಮುಂದೆ ಇಟ್ಟು ನಂತರ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಸಾಲಬಾಧೆಯಿಂದ ಮುಕ್ತಿ ಹೊಂದಬಹುದು ಹಾಗೂ ನಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.ತಲೆದಿಂಬಿನ ಕೆಳಗಡೆ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ಇಟ್ಟು ಮಲಗುವುದರಿಂದ ಆರ್ಥಿಕವಾಗಿ ಪ್ರಬಲವಾಗುತ್ತೇವೆ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸಬಹುದು.