Uncategorized

ಕರಿಬೇವಿನ ಚಮತ್ಕಾರ ಉಪಯೋಗ ತಿಳಿದುಕೊಳ್ಳಿ . ಇಷ್ಟೊಂದು ಲಾಭನಾ ?

ಕಹಿಬೇವು ಚಯಾಪಚಯ ಸಾಮರ್ಥ್ಯವನ್ನು ಹೆಚ್ಚಿಸಿದಂತೆ, ಕೊಬ್ಬಿನ ಚಯಾಪಚಯ ಕ್ರಿಯೆಗೆ ಕಾರಣವಾದ ಹಾರ್ಮೋನ್ ಅನ್ನು ಒಡೆಯುವ ಕಿಣ್ವವನ್ನು ತಡೆಯಲು ಇದು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಜೊತೆಗೆ ವ್ಯಾಯಾಮ ಮಾಡುವಾಗ ಕೊಬ್ಬನ್ನು ಕಡಿಮೆ ಮಾಡಲು ಬೇವು ಸೇವನೆ ಉತ್ತಮ ಎಂಬುದು ಅನೇಕ ಸಂಶೋಧನೆಗಳು ತಿಳಿಸಿವೆ.

ಕಹಿಬೇವು ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವುದು. ಹಾಗಾಗಿ ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ದೇಹವು ಯಾವುದೇ ಕೊಬ್ಬಿನ ಹೀರಿಕೊಳ್ಳದಂತೆ ಸ್ವಯಂಚಾಲಿತವಾಗಿ ನಿಯಂತ್ರಿಸುವುದು. ಅಷ್ಟೇ ಅಲ್ಲ, ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುವುದು. ನಿಮ್ಮ ದಿನಚರಿಯಲ್ಲಿ ಕಹಿ ಬೇವನ್ನು ಸೇರಿಸುವುದು ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸುಸ್ಥಿರ ಮತ್ತು ನೈಸರ್ಗಿಕ ವಿಧಾನವಾಗಿದೆ.

ನಿಮ್ಮ ಆಂತರಿಕ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಮೂಲಕ, ರಕ್ತವನ್ನು ಶುದ್ಧೀಕರಿಸುವುದು. ಈ ಮುಖಾಂತರ ದೇಹದಿಂದ ಹಾನಿಕಾರಕ ರಾಸಾಯನಿಕಗಳನ್ನು ಹೊರಹಾಕಲು ಕಹಿಬೇವು ಸಹಾಯ ಮಾಡುತ್ತದೆ. ಇದಲ್ಲದೆ, ತೂಕ ಹೆಚ್ಚಾಗಲು ಕಾರಣವಾಗುವ ಅಂಶವಾಗಿರುವ ಉರಿಯೂತವನ್ನು ತಡೆಗಟ್ಟುತ್ತದೆ. ದೇಹದಿಂದ ಅನಾರೋಗ್ಯಕರ ಅಥವಾ ಹೆಚ್ಚು ಅಲರ್ಜಿಕ್ ಪದಾರ್ಥಗಳನ್ನು ಹೊರಹಾಕುವ ಮೂಲಕ ಒಟ್ಟಾರೆ ಆರೋಗ್ಯವನ್ನು ಕಾಪಾಡುವುದು. ಆರೋಗ್ಯಕರ ದೇಹವು ಸಕಾರಾತ್ಮಕ ಮತ್ತು ಆರೋಗ್ಯಕರ ತೂಕ ನಷ್ಟವನ್ನು ಮಾತ್ರ ಬೆಂಬಲಿಸುತ್ತದೆ.

ತೂಕ ನಷ್ಟಕ್ಕೆ ಉತ್ತಮ ಚಯಾಪಚಯ ಶಕ್ತಿ ಬಹಳ ಮುಖ್ಯ. ಕಹಿ ಬೇವು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ನಿಮ್ಮ ತೂಕದಲ್ಲಿ ತೀವ್ರ ಬದಲಾವಣೆಗಳಿಗೆ ಕಾರಣವಾಗುವ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುವುದು.

ತೂಕ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಅಸಮತೋಳಿತ ಆಹಾರ ಸೇವನೆ. ಕಹಿ ಬೇವಿನಲ್ಲಿ ಫೈಬರ್ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದು. ಈ ಮೂಲಕ ನಿಮ್ಮ ಹಸಿವನ್ನು ನಿರ್ಬಂಧಿಸುತ್ತದೆ ಜೊತೆಗೆ ಮುಂದಿನ ಊಟದಲ್ಲಿ ಕಡಿಮೆ ತಿನ್ನುವಂತೆ ಮಾಡುವುದು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಇಡುವುದು. ಈ ಎಲೆಗಳೊಳಗಿನ ನಾರಿನಂಶವು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡಲು ನೆರವಾಗುವುದಲ್ಲದೇ, ಯಾವುದೇ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸುವುದು.

Related Articles

Leave a Reply

Your email address will not be published. Required fields are marked *

Back to top button