ಗರ್ಭಾವಸ್ಥೆಯಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಗೊತ್ತಾ..? ಒಳ್ಳೆಯ ಮಾಹಿತಿ ಎಲ್ಲರೂ ತಪ್ಪದೆ ನೋಡಿ..
ಪ್ರತಿ ಹೆಣ್ಣಿಗೂ ತಾಯಿಯಾಗುವುದು ಎಂದರೆ ಸಂಭ್ರಮ, ಆದರೆ ಮೊದಲ ಗರ್ಭಾವಸ್ಥೆಯಲ್ಲಿ ಅನೇಕ ರೀತಿಯ ಗೊಂದಲಗಳು ಆಕೆಯನ್ನು ಕಾಡುತ್ತಿರುತ್ತದೆ. ಹಲವರು ಹಲವು ಸಲಹೆ ನೀಡುವುದು ಸರ್ವೇಸಾಮಾನ್ಯ. ಹಾಗೆ ಮಾಡಬೇಡ, ಹೀಗೆ ಮಾಡಬೇಡ, ಹಾಗೆ ಇರು, ಹೀಗೆ ಇರು ಎಂದು ಒಂದಷ್ಟು ವಿಚಾರಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ಅನೇಕ ಸಲಹೆಗಳು ಗೊಂದಲಕ್ಕೂ ಕಾರಣವಾಗುತ್ತದೆ ಎಂಬುದು ಸತ್ಯವೆ. ಆದರೂ ಕೆಲವು ವಿಚಿತ್ರವೆನಿಸುವ ಸತ್ಯಗಳನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಹೌದಾ, ನಿಜವಾಗಲೂ ಹೀಗೆ ಮಾಡಬಾರದಾ ಎಂದು ನಿಮಗೆ ನೀವೇ ಕೇಳಿಕೊಳ್ಳುವಂತಹ ಕೆಲವು ವಿಚಾರಗಳಿವು. ಹೌದು ಗರ್ಭಿಣಿಯರಿಗಾಗಿ ನಾವಿಲ್ಲಿ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ನೀವು ಹಸಿ ತರಕಾರಿಗಳನ್ನು ಸೇವಿಸಲು ಬಹಳ ಇಷ್ಟಪಡುವವರಾಗಿರಬಹುದು. ಸಲಾಡ್ ಗಳೆಂದರೆ ನಿಮಗೆ ಪಂಚಪ್ರಾಣವಿರಬಹುದು. ಆದರೆ ಇಂತಹ ಆಹಾರಗಳಲ್ಲಿ ಬ್ಯಾಕ್ಟೀರಿಯಾಗಳು ಜೀವಂತವಾಗಿರುವ ಸಾಧ್ಯತೆ ಇದ್ದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸಾಧ್ಯತೆ ಇರುತ್ತದೆ. ಈ ರೀತಿಯ ಆಹಾರ ಮತ್ತು ಸಂಸ್ಕರಿಸಿದ ಆಹಾರಗಳು ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯದಲ್ಲ. ಇತರರಿಗೆ ಹೋಲಿಸಿದರೆ ಈ ಆಹಾರಗಳು ಗರ್ಭಿಣಿ ಸ್ತ್ರೀಯರಿಗೆ ಹೆಚ್ಚು ತೊಂದರೆ ಮಾಡಿರುವುದು ಈಗಾಗಲೇ ಅಧ್ಯಯನದಿಂದ ತಿಳಿದಿರುವ ಸಂಗತಿಯಾಗಿದೆ. ಕುದಿಸುವಿಕೆ,ಬೇಯಿಸುವಿಕೆಯಿಂದ ಇಂತಹ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಾಧ್ಯವಾಗುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರು ಪ್ಯಾಕೆಟ್ ಆಹಾರಗಳನ್ನು ಸೇವಿಸದೆ ತಾಜಾವಾಗಿ ಅಡುಗೆ ಮಾಡಿದ ಆಹಾರ ಸೇವನೆಗೆ ಆದ್ಯತೆ ನೀಡಬೇಕು.
ಆರೋಗ್ಯಕರ ರೀತಿಯಲ್ಲಿ ಮಾಡದೇ ಇದ್ದಲ್ಲಿ ಟ್ಯಾಟೋ ಹಾಕಿಸಿಕೊಳ್ಳುವುದು ಬಹಳ ಡೇಂಜರಸ್. ಟ್ಯಾಟೋ ಹಾಕಿಸಿಕೊಳ್ಳುವುದರಿಂದಾಗಿ ಸಾಮಾನ್ಯವಾಗಿ ಜನರಿಗೆ ಅನೇಕ ರೀತಿಯ ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಚರ್ಮಕ್ಕೆ ಚುಚ್ಚುವಿಕೆಯಲ್ಲಿ ಬಳಸಲಾಗುವ ಸೂಜಿ ಉತ್ತಮ ರೀತಿಯಲ್ಲಿ ಇಲ್ಲದೇ ಇದ್ದಲ್ಲಿ ಅಥವಾ ಅನೇಕ ಕಾರಣಗಳಿಂದಾಗಿ ಟ್ಯಾಟೋ ತೊಂದರೆಯನ್ನುಂಟು ಮಾಡುತ್ತದೆ. ಅದರಲ್ಲೂ ಗರ್ಭಿಣಿಯರು ತಮ್ಮ ದೈಹಿಕ ಹಾರ್ಮೋನುಗಳು ಬದಲಾಗುತ್ತಿರುವ ಸಂದರ್ಬದಲ್ಲಿ ಇಂತಹ ಕೆಲಸಕ್ಕೆ ಕೈ ಹಾಕುವುದು ಒಳ್ಳೆಯದಲ್ಲ. ಆ ಮೂಲಕ ನಿಮ್ಮ ಹೊಟ್ಟೆಯಲ್ಲಿರುವ ಮುದ್ದು ಮಗುವನ್ನು ಯಾವುದೇ ಕಾರಣಕ್ಕೂ ತೊಂದರೆಗೆ ನೂಕಬೇಡಿ
ಸ್ಕೇಟಿಂಗ್ ಅಥವಾ ಇತರೆ ಯಾವುದೇ ರೀತಿಯ ಆಟಗಳು ಉದಾಹರಣೆಗೆ ಕುದುರೆ ಸವಾರಿ, ಸ್ಕೈ ಡೈವಿಂಗ್, ಸೈಕಲಿಂಗ್ ಮತ್ತು ಹಾಕಿ,ಬಾಸ್ಕೆಟ್ ಬಾಲ್ ಇತ್ಯಾದಿ ಆಟಗಳು ಗರ್ಭಿಣಿ ಸ್ತ್ರೀಯರಿಗೆ ತೊಂದರೆಯುಂಟು ಮಾಡುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ವೈದ್ಯರ ಸಲಹೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಹೊಟ್ಟೆಯ ಭಾಗವು ಉಬ್ಬುವುದರಿಂದಾಗಿ ಈ ರೀತಿಯ ಆಟಗಳು ಹೆಚ್ಚು ಸಮಸ್ಯೆಗೆ ಕಾರಣವಾಗಬಹುದು. ಹೊಟ್ಟೆಯ ಉಬ್ಬುವಿಕೆಯಿಂದಾಗಿ ನಿಮ್ಮ ಸೊಂಟದ ಭಾಗದ ಬ್ಯಾಲೆನ್ಸ್ ಕಡಿಮೆಯಾಗಿ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಗರ್ಭಿಣಿಯಾಗಿದ್ದಾಗ ಇಂತಹ ಆಕ್ಟಿವಿಟಿಗಳಿಂದ ದೂರವಿರುವುದು ಒಳ್ಳೆಯದು.
ಮನೋರಂಜನಾ ಉದ್ಯಾನವನಗಳ ರೈಡಿಂಗ್ ಬೇಡ ಅಂದರೆ ಹೆಚ್ಚು ಏರುತಗ್ಗುಗಳಿರುವ ಪ್ರದೇಶ, ಒಮ್ಮೆಲೆ ಬರುವ ತಿರುವುಗಳು,ತಟ್ಟನೆ ಬರುವ ನಿಲ್ದಾಣ, ವೇಗದ ಪ್ರಾರಂಭಗಳು ಹೀಗೆ ಇರುವ ಜಾಗಗಳಲ್ಲಿ ನಿಮ್ಮ ಓಡಾಟ ಬೇಡ. ಇಂತಹ ಖುಷಿ ಹಂಚಿಕೊಳ್ಳುವಿಕೆಗಳು ಬಹಳ ಕೆಟ್ಟ ಸಮಸ್ಯೆಯನ್ನುಂಟು ಮಾಡಬಹುದು. ಇವುಗಳು ಜರಾಡು ಅಡ್ಡಪಡಿಸುವಿಕೆ ಅಥವಾ ಗರ್ಭಧಾರಣೆಯ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಬಹಳ ವಿಚಿತ್ರ ಅನ್ನಿಸಬಹುದು. ಆದರೆ ಈ ಬಗ್ಗೆ ಗರ್ಭಿಣಿಯರಿಗೆ ಸ್ವಲ್ಪ ಜಾಗೃತೆ ಅಗತ್ಯ. ಅದರಲ್ಲೂ ಕೂಡ ಬೆಕ್ಕಿನ ಹೇಲು ಟೋಕ್ಸೋಪ್ಲಾಸ್ಮೋಸಿಸ್ ಅನ್ನು ಒಳಗೊಂಡಿರುತ್ತದೆ. ಇದು ನಿಮಗೆ ಸೋಂಕು ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಂದರ್ಬದಲ್ಲಿ ನಿಮ್ಮ ಮುದ್ದು ಪ್ರಾಣಿಗಳನ್ನು ಸ್ವಲ್ಪ ಜಾಗರೂಕತೆಯಿಂದ ನೋಡಿಕೊಳ್ಳುವ ಜವಾಬ್ದಾರಿಯನ್ನು ಬೇರೆಯವರಿಗೆ ಹೊರಿಸುವುದು ಸೂಕ್ತ.
ಇದು ಕೂಡ ನಿಮಗೆ ಬಹಳ ವಿಚಿತ್ರವೆನ್ನಿಸಬಹುದು. ಆದರೆ ನಿಮ್ಮ ಹೊಟ್ಟೆಯೊಳಗಿರುವ ಮಗುವು ಹೊರಗಿನ ಎಲ್ಲಾ ಶಬ್ದಗಳನ್ನು ಆಲಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ. ಗಟ್ಟಿ ಶಬ್ದಗಳು ಮಗುವಿಗೆ ತೊಂದರೆಯುಂಟು ಮಾಡಬಹುದು. ಹಾಗಾಗಿ ನಿಮ್ಮ ಹೊಟ್ಟೆಯ ಬಳಿ ಮೊಬೈಲ್ ಫೋನ್ ಇಟ್ಟುಕೊಳ್ಳಬೇಡಿ. ಫೋನ್ ಬಂದಾಗ, ರಿಂಗ್ ಟೋನ್ ಗಳು ಭ್ರೂಣಕ್ಕೆ ಕಿರಿಕಿರಿ ಅನ್ನಿಸಬಹುದು. ನಿಮ್ಮ ಮುದದು ಕಂದಮ್ಮ ಆರಾಮಾದಾಯಕವಾಗಿರುವ ಶಬ್ದಗಳಿಂದ ಬೆಳೆಯಲಿ. ಆದಷ್ಟು ಕಿವಿಗೆ ಇಂಪೆನಿಸುವ ಶಬ್ದಗಳನ್ನು ಮಗುವು ಆಲಿಸಲಿ.
ಆದರೆ ಅತೀ ಹೆಚ್ಚು ಮರ್ಕ್ಯುರಿ ಹೊಂದಿರುವ ಆಹಾರಗಳು ನೋ ನೋ! ಬೇಡವೇ ಬೇಡ. ಇದು ಮನುಷ್ಯನ ನರವ್ಯೂಹ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಮಾಡುತ್ತದೆ. ಹಾಗಾಗಿ ಭ್ರೂಣದ ಬೆಳವಣಿಗೆಯ ಮೇಲೂ ಪರಿಣಾಮ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಟೇಲ್ ಫಿಶ್, ಶಾರ್ಕ್, ಕಿಂಗ್ ಮಾರ್ಕ್ ವೆಲ್ ಗಳನ್ನು ಈ ಸಂದರ್ಬದಲ್ಲಿ ಸೇವಿಸಬೇಡಿ. ಸಾಲ್ಮನ್ಸ್,ಅಂಕೋವಿಸ್ ಗಳು ಓಕೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಪ್ರತಿಯೊಬ್ಬರೂ ಕೂಡ ಚೆಂದದ ಬಿಳಿಬಿಳಿಯಾಗಿರುವ ಹಲ್ಲುಗಳನ್ನು ಇಚ್ಛಿಸುತ್ತಾರೆ. ಹಾಗೆಯೇ ಗರ್ಭಿಣಿ ಸ್ತ್ರೀಯರು ಬಯಸುವುದು ಸಹಜ. ಆದರೆ ಈ ಸಂದರ್ಬದಲ್ಲಿ ಹಲ್ಲುಗಳ ಸಾಮಾನ್ಯ ಚೆಕ್ ಅಪ್ ಮತ್ತು ಕ್ಲೀನಿಂಗ್ ಚಿಕಿತ್ಸೆಗಳನ್ನು ಮಾತ್ರವೇ ಮಾಡಿಸಿಕೊಳ್ಳುವುದು ಸೂಕ್ತ.ಯಾವುದೇ ರೀತಿಯ ಕಾಸ್ಮೆಟಿಕ್ ಡೆಂಟಲ್ ಚಿಕಿತ್ಸೆಗಳು ಈ ಸಂದರ್ಬದಲ್ಲಿ ಯೋಗ್ಯವಲ್ಲ. ಮಗುವು ಜನಿಸುವವರೆಗೆ ಇಂತಹ ಟ್ರೀಟ್ ಮೆಂಟ್ ಗಳನ್ನು ಮಾಡಿಸಿಕೊಳ್ಳಬೇಡಿ. ದಂತವೈದ್ಯರೂ ಕೂಡ ಮಾಡುವುದಿಲ್ಲ. ಈ ಎಲ್ಲಾ ವಿಚಾರಗಳು ನಿಮಗೆ ಬಹಳ ವಿಚಿತ್ರ ಅನ್ನಿಸುತ್ತಿರಬಹುದು. ಆದರೆ ಖಂಡಿತವಾಗಲೂ ನೀವು ಇವುಗಳನ್ನು ಮಾಡಲೇಬಾರದು ಎಂಬುದು ನೆನಪಿನಲ್ಲಿ ಇರಲಿ. ಯಾವುದೇ ರೀತಿಯ ಅನುಮಾನಗಳಿದ್ದರೂ ಕೂಡ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಸತ್ಯ ಮತ್ತು ಮಿಥ್ಯಗಳ ಪರಿಚಯ ಖುದ್ದು ನಿಮಗೆ ಇರಲಿ. ಆರೋಗ್ಯಕರವಾಗಿರುವ ಗರ್ಭಧಾರಣೆ ನಿಮ್ಮದಾಗಲಿ.