ಸುದ್ದಿ

ಬಿಗ್ ಬಾಸ್ ನಿಂದ ಹೊರ ಬಂದ ನಿಧಿ ಸುಬ್ಬಯ್ಯ ಅವರಿಗೆ ಸಿಕ್ಕ ದುಬಾರಿ ಸಂಭಾವನೆ ಎಷ್ಟು ಗೊತ್ತಾ..

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಿ ಎರಡೂ ಇನ್ನಿಂಗ್ಸ್ ನಲ್ಲಿ ಪಾಲ್ಗೊಂಡು ಒಟ್ಟು ತಮ್ಮ ಎಂಭತ್ತು ದಿನಗಳ ಜರ್ನಿಯನ್ನು ಮುಗಿಸಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಇದೀಗ ನಿಧಿ ಸುಬ್ಬಯ್ಯ ಅವರು ಹೊರ ನಡೆದಿದ್ದಾರೆ.. ಹೌದು ಮೊದಲ ಇನ್ನಿಂಗ್ಸ್ ನಲ್ಲಿ ಎಪ್ಪತ್ತು ದಿನಗಳು.. ಎರಡನೇ ಇನ್ನಿಂಗ್ಸ್ ನಲ್ಲಿ ಹತ್ತು ದಿನಗಳ ಜರ್ನಿ ಮುಗಿಸಿದ ನಿಧಿ ಸುಬ್ಬಯ್ಯ ಎರಡನೇ ಇನ್ನಿಂಗ್ಸ್ ನಿಂದ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದಾರೆ.. ಇನ್ನು ನಿಧಿ ಸುಬ್ಬಯ್ಯ ಅವರಿಗೆ ಬಿಗ್ ಬಾಸ್ ನಿಂದ ಸಿಕ್ಕ ಹಣವೆಷ್ಟು ಎಂಬ ಸಣ್ಣ ಕುತೂಹಲ ಬಿಗ್ ಬಾಸ್ ಪ್ರೇಕ್ಷಕರಿಗೆ ಇದ್ದೇ ಇದೆ.. ಆ ಎಲ್ಲಾ ಕುತೂಹಲಕ್ಕೂ ಉತ್ತರ ಇಲ್ಲಿದೆ ನೋಡಿ..

ಹೌದು ಸ್ಯಾಂಡಲ್ವುಡ್ ಬಾಲಿವುಡ್ ಸೇರಿದಂತೆ ಇತರ ಭಾಷೆಗಳ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕನಟಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡ ನಟಿ‌ ನಿಧಿ ಸುಬ್ಬಯ್ಯ ಅವರು ಬಿಗ್ ಬಾಸ್ ಕನ್ನಡದ ಸೀಸನ್ ಎಂಟರಲ್ಲಿ ಭಾಗವಹಿಸಿದ್ದು ಅವರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡಲಾಗಿದೆ ಎಂದು ತಿಳಿದು ಬಂದಿದೆ.. ಹೌದು ನಿಧಿ ಸುಬ್ಬಯ್ಯ ಅವರು.. ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೇ ಕಾಣಿಸಿಕೊಂಡರೂ ಸಹ ನಾಲ್ಕು ವರ್ಷದ ಹಿಂದೆ ಉದ್ಯಮಿಯೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಸರಿದು ವಿದೇಶದಲ್ಲಿ ಹೋಗಿ ನೆಲೆಸಿದ್ದರು.. ಆದರೆ ವ್ಯಯಕ್ತಿಕ ಕಾರಣಗಳಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಕಾನೂನು ರೀತಿಯಾಗಿ ನಿಧಿ ಅವರು ತಮ್ಮ ಪತಿಯಿಂದ ದೂರವಾಗಿ ಮರಳಿ ಭಾರತಕ್ಕೆ ಬಂದು ನೆಲೆಸಿದರು.. ಇದಾದ ಬಳಿಕ ಮತ್ತೆ ಚಿತ್ರರಂಗದಲ್ಲಿಯೂ ಕಾಣಿಸಿಕೊಳ್ಳದ ನಿಧಿ ಸುಬ್ಬಯ್ಯ ಅವರು ಬಿಗ್ ಬಾಸ್ ಮೂಲಕ ಮತ್ತೊಮ್ಮೆ ಜನರ ಮುಂದೆ ಬಂದರು..

ಇನ್ನು ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಿರಿಕ್ ಮಾಡಿಕೊಳ್ಳದೇ ಆಡಂಬರದ ಅಲಂಕಾರವೂ ಇಲ್ಲದೇ ಸರಳವಾಗಿಯೇ ಇದ್ದ ನಿಧಿ ಸುಬ್ಬಯ್ಯ ಬಿಗ್ ಬಾಸ್ ನಲ್ಲಿ ಎಂಬತ್ತು ದಿನಗಳನ್ನು ಪೂರೈಸುವಲ್ಲಿ ಯಶಸ್ವಿಯಾದರು.. ಇನ್ನು ಅಷ್ಟೂ ದಿನದ ಜರ್ನಿಯಲ್ಲಿ ಯಾವುದೇ ಗಲಾಟೆಗಳಲ್ಲಿ ಭಾಗಿಯಾಗದ ನಿಧಿ ರಘು ಜೊತೆ ಒಮ್ಮೆ ಹಾಗೂ ಅರವಿಂದ್ ಜೊತೆ ಒಮ್ಮೆ ಮಾತಿಗೆ ಮಾತು ಬೆಳೆದು ಕೊಂಚ ವಿವಾದವೂ ಸೃಷ್ಟಿಯಾಗಿತ್ತು‌‌.. ಇನ್ನು ಬಿಗ್ ಬಾಸ್ ಮನೆಯಲ್ಲಿ ಶುಭ ಪೂಂಜಾ ಅವರ ಜೊತೆ ಮೊದಲ ದಿನದಿಂದಲೂ ಬಹಳ ಆಪ್ತವಾಗಿದ್ದ ನಿಧಿ ಸುಬ್ಬಯ್ಯ ಅದ್ಯಾಕೋ ಕಳೆದ ವಾರ ಇಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿ ಕೊನೆಗೆ ನಿನ್ನೆಯ ವಾರದ ಕತೆಯಲ್ಲಿ ಸುದೀಪ್ ಅವರು ನಿಧಿ ಹಾಗೂ ಶುಭಾ ಇಬ್ಬರನ್ನು ಒಂದು ಮಾಡಿದ್ದರು..

ಇನ್ನು ಸಂಭಾವನೆಯ ವಿಚಾರಕ್ಕೆ ಬಂದರೆ ಸ್ಯಾಂಡಲ್ವುಡ್ ನಾಯಕ ನಟಿಯ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ನಿಧಿ ಸುಬ್ಬಯ್ಯ ಅವರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡಲಾಗಿದೆ.. ಹೌದು ನಿಧಿ ಸುಬ್ಬಯ್ಯ ಅವರಿಗೆ ವಾರಕ್ಕೆ ಐವತ್ತು ಸಾವಿರ ರೂಪಾಯಿಗಳ ಸಂಭಾವನೆ ನಿಗದಿ ಮಾಡಿದ್ದು ಬಿಗ್ ಬಾಸ್ ನಲ್ಲಿ ಇರುವಷ್ಟು ವಾರಗಳಿಗೆ ಸಂಭಾವನೆ ನೀಡಲಾಗುತಿತ್ತು.. ಅದೇ ರೀತಿ ನಿಧಿ ಸುಬ್ಬಯ್ಯ ಒಟ್ಟು ಎಂಭತ್ತು ದಿನಗಳ ಕಾಲ ಅಂದರೆ ಹನ್ನೆರೆಡು ವಾರಗಳ ಕಾಲ ಮನೆಯಲ್ಲಿ ಇದ್ದು ಅವರಿಗೆ ಒಟ್ಟು ಆರು ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ..

ಇನ್ನು ಸಧ್ಯ ಬಿಗ್ ಬಾಸ್ ಮೂಲಕ ಕಂಬ್ಯಾಕ್‌ ಮಾಡಿರುವ ನಿಧಿ ಸುಬ್ಬಯ್ಯ ಮುಂಬರುವ ದಿನಗಳಲ್ಲಿ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುವ ಎಲ್ಲಾ ಸೂಚನೆಗಳನ್ನು ನೀಡಿದ್ದು ಬಿಗ್ ಬಾಸ್ ಮೂಲಕ ತಮ್ಮ ವೃತ್ತಿ ಜೀವನದ ಹೊಸ ಅಧ್ಯಾಯವನ್ನು ನಿಧಿ ಸುಬ್ಬಯ್ಯ ಶುರು ಮಾಡಲಿದ್ದಾರೆ ಎನ್ನಬಹುದು..

Related Articles

Leave a Reply

Your email address will not be published. Required fields are marked *

Back to top button