ಸುದ್ದಿ

ಚಿರು ಇಲ್ಲವಾದ ವರ್ಷದ ಬಳಿಕ ಹೊಸ ವೃತ್ತಿ ಆರಂಭಿಸಿದ ನಟಿ ಮೇಘನಾ ರಾಜ್.. ಯಾವ ಕೆಲಸ ಗೊತ್ತಾ..

ನಟಿ ಮೇಘನಾ ರಾಜ್.. ಸಧ್ಯ ಜೂನಿಯರ್ ಚಿರುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿರುವ ಮೇಘನಾ ರಾಜ್ ಅವರು ಸಧ್ಯ ತಮ್ಮ ವೃತ್ತಿ ಬದುಕಿನ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ.. ಹೌದು ಮೇಘನಾ ರಾಜ್ ಹಾಗೂ ಅವರ ಸಂಪೂರ್ಣ ಕುಟುಂಬ ಅವರ ತಂದೆ ಸುಂದರ್ ರಾಜ್ ಅವರಾಗಿರಬಹುದು ತಾಯಿ ಪ್ರಮಿಳಾ ಸುಂದರ್ ಅವರಾಗಿರಬಹುದು ಎಲ್ಲರೂ ಸಿನಿಮಾ ಹಿನ್ನೆಲೆಯವರು.. ಅದಕ್ಕೂ ಮಿಗಿಲಾಗಿ ಸಿನಿಮಾವನ್ನೇ ಅನ್ನ ಕೊಡುವ ದೇವರು ಎಂದುಕೊಂಡವರು.. ದಶಕಗಳಿಂದಲೇ ಸಿನಿಮಾದಿಂದಲೇ ಜೀವನ ನಡೆಸಿಕೊಂಡು ಹೋಗುತ್ತಿದ್ದವರು.. ಇನ್ನು ಮೇಘನಾ ರಾಜ್ ಅವರೂ ಸಹ ಸಿನಿಮಾ ಹಾದಿಯನ್ನೇ ಹಿಡಿದು ಅಪ್ಪ ಅಮ್ಮನಂತೆ ಕನ್ನಡ ಹಾಗೂ ಮಳಯಾಳಂ ಸಿನಿಮಾದಲ್ಲಿ ಮಿಂಚುತ್ತಿದ್ದರು.. ಆ ಬಳಿಕ ಮೇಘನಾ ಅವರು ಮದುವೆಯಾದ ಚಿರು ಸರ್ಜಾ ಕೂಡ ಒಬ್ಬ ನಟನೇ.. ಒಟ್ಟಿನಲ್ಲಿ ಸಂಪೂರ್ಣ ಕುಟುಂಬ ಸಿನಿಮಾ ಕುಟುಂಬವೇ ಆಯಿತು.. ಇನ್ನು ಹತ್ತು ವರ್ಷಗಳ ಕಾಲ ಚಿರು ಮೇಘನಾ ರಾಜ್ ಪ್ರೀತಿಸಿ ಮನೆಯವರನ್ನೆಲ್ಲಾ ಒಪ್ಪಿಸಿ ಮೂರು ವರ್ಷದ ಹಿಂದೆ ಮದುವೆಯೂ ಆದರು..

ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಅನೇಕ ಫೋಟೋಗಳು ವೈರಲ್ ಆಗುತ್ತಿದ್ದವು.. ಅಭಿಮಾನಿಗಳು ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸುತ್ತಿದ್ದರು.. ಅಷ್ಟು ಮುದ್ದಾಗಿತ್ತು ಈ ಜೋಡಿ.. ಯಾವುದೇ ಕಿರುತೆರೆ ಶೋ ನಲ್ಲಿ ಪಾಲ್ಗೊಂಡಾಗಲೂ ಒಬ್ಬರನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ.. ಆದರೆ ಎಲ್ಲರಿಗೂ ತಿಳಿದಂತೆ ಕಳೆದ ವರ್ಷ ಜೂನ್ ಏಳರಂದು ಚಿರು ಸರ್ಜಾ ಅವರು ಅಕಾಲಿಕವಾಗಿ ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದರು.. ಇತ್ತ ಐದು ತಿಂಗಳ ಗರ್ಭಿಣಿ ಮೇಘನಾ ಅವರ ಪರಿಸ್ಥಿತಿ ಯಾವ ಶತ್ರುವಿಗೂ ಬಾರದಿರಲಿ ಎನ್ನುವಂತಿತ್ತು.. ಜೊತೆಗೆ ಮೇಘನಾ ಅವರು ಗರ್ಭಿಣಿ ಆಗಿದ್ದರಿಂದ ಲಕ್ಷಾಂತರ ಜನರು ಮೇಘನಾ ಅವರಿಗಾಗಿ ಪ್ರಾರ್ಥಿಸಿ ಅವರ ಒಡಲಲ್ಲಿ ಚಿರು ಮತ್ತೆ ಹುಟ್ಟಿ ಬರಲೆಂದು ಹಾರೈಸಿದ್ದರು..

ಎಲ್ಲರ ಪ್ರಾರ್ಥನೆಯ ಫಲವಾಗಿ ಅದೇ ರೀತಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು ಇದೀಗ ಮಗನೇ ಪ್ರಪಂಚವೆಂದು ಬದುಕುತ್ತಿದ್ದಾರೆ.. ಇನ್ನು ಗರ್ಭಿಣಿ ಆಗುವವರೆಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ರಾಜ್ ನಂತರ ಗರ್ಭಿಣಿಯಾದ ಕಾರಣ ಕೊಂಚ ಬ್ರೇಕ್ ಪಡೆದರು.. ಇತ್ತ ಕೊರೊನಾ ಕಾರಣದಿಂದಾಗಿ ಅಷ್ಟಾಗಿ ಯಾವ ಸಿನಿಮಾಗಳು ಸೆಟ್ಟೇರಲಿಲ್ಲ.. ಇನ್ನು ಮಗುವಿನ ಕೆಲಸಗಳಲ್ಲಿಯೇ ಬ್ಯುಸಿ ಆದ ಮೇಘನಾ ರಾಜ್ ಕೆಲ ತಿಂಗಳ ನಂತರ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.. ನಮಗೇ ಸಿನಿಮಾವೇ ದೇವರು.. ಅದನ್ನು ಬಿಟ್ಟು ನಮಗೆ ಬೇರೆ ದಾರಿ ಇಲ್ಲ.. ಮತ್ತೆ ನನ್ನ ಸಿನಿಮಾ ಕೆಲಸ ಶುರು ಮಾಡಬೇಕು ಎಂಬುದು ಮೇಘನಾ ಅವರ ಮಾತಾಗಿದೆ.. ಆದರೆ ಈ ಎಲ್ಲದರ ನಡುವೆ ಮೇಘನಾ ಅವರು ಹೊಸ ಕೆಲಸವೊಂದನ್ನು ಆರಂಭಿಸಿದ್ದಾರೆ..

ಹೌದು ಮೇಘನಾ ರಾಜ್ ಅವರು ಸಧ್ಯ ಮಗುವಿನ ಜೊತೆ ಮನೆಯಲ್ಲಿದ್ದು ಮಗುವಿನ ಹಾರೈಕೆಯಲ್ಲಿ ತೊಡಗಿದ್ದರೂ ಸಹ ಸುಮ್ಮನೆ ಕುಳಿತಿಲ್ಲ.. ಬದಲಿಗೆ ತಮ್ಮ ವೃತ್ತಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.. ಹೌದು ಮನೆಯಲ್ಲಿದ್ದುಕೊಂಡೇ ಅನೇಕ ಜಾಹೀರಾತುಗಳಲ್ಲಿ ಮೇಘನಾ ರಾಜ್ ಅವರು ತೊಡಗಿಸಿಕೊಂಡಿದ್ದಾರೆ.. ಹೌದು ಈಗ ಆನ್ಲೈನ್ ಪ್ರಮೋಷಮ್ ಒಂದು ರೀತಿಯಲ್ಲಿ ಬಹು ಬೇಡಿಕೆಯಾಗಿದೆ.. ಇತ್ತ ಲಕ್ಷಾಂತರ ಅಭಿಮಾನಿ ಫಾಲೋವರ್ಸ್ ಗಳು ಇರುವ ಮೇಘನಾ ರಾಜ್ ಅವರೂ ಸಹ ಅದಾಗಲೇ ಅನೇಕ ಪ್ರಾಡಕ್ಟ್ ಗಳ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ.. ಅದರಲ್ಲೂ ಇತ್ತೀಚಿಗೆ ತಾಯಿಯಾದ ಮೇಘನಾ ಅವರು ಸಣ್ಣ ಮಗುವಿಗೆ ಸಂಬಂಧಪಟ್ಟ ಅನೇಕ ಪ್ರಾಡಕ್ಟ್ ಗಳ ಕುರಿತು ಜಾಹಿರಾತು ನೀಡಿದ್ದಾರೆ.. ಈಗಲೂ ಸಹ ಹೊಸ ಹೊಸ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಮುಂದೆ ಕೊರೊನಾ ಎಲ್ಲಾ ಕಳೆದು ಚಿತ್ರರಂಗ ಎಂದಿನಂತೆ ಮರಳುವವರೆಗೂ, ಸಿನಿಮಾಗಳಲ್ಲಿ ಅಭಿನಯಿಸುವವರೆಗೂ ಒಳ್ಳೆಯ ಜಾಹೀರಾತುಗಳ ಅವಕಾಶ ಒದಗಿ ಬಂದರೆ ಅವುಗಳಲ್ಲಿ ಮೇಘನಾ ರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ..

ಇನ್ನು ಕನ್ನಡ ಮಾತ್ರವಲ್ಲದೇ ಮಳಯಾಳಂ ಸಿನಿಮಾಗಳಲ್ಲಿಯೂ ಬಹಳಷ್ಟು ಖ್ಯಾತಿ ಗಳಿಸಿರುವ ಮೇಘನಾ ರಾಜ್ ಅವರು ಮಳಾಯಳಂ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಸಹ ಹೌದು.. ಇನ್ನು ಮುಂಬರುವ ದಿನಗಳಲ್ಲಿ ಕನ್ನಡದ ಜೊತೆಗೆ ಅಲ್ಲಿನ ಚಿತ್ರರಂಗದಲ್ಲಿಯೂ ಸಹ ಮೇಘನಾ ರಾಜ್ ಅವರು ಸಕ್ರಿಯರಾಗಲಿದ್ದಾರೆ ಎನ್ನಲಾಗಿದೆ.. ಒಟ್ಟಿನಲ್ಲಿ ಮಗಿವಿನ ಜೊತೆ ತಮ್ಮ ಮುಂದಿನ ಸಂಪೂರ್ಣ ಜೀವನ ಕಳೆಯುವ ನಿರ್ಧಾರದಲ್ಲಿರುವ ಮೇಘನಾ ರಾಜ್ ಅವರ ಎಲ್ಲಾ ಕೆಲಸಗಳಿಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button