ರೆಬೆಲ್ ಅಂಬರೀಷ್ ಹುಟ್ಟು ಹಬ್ಬದಂದು ಕಿಚ್ಚ ಸುದೀಪ್ ಮಾಡಿರುವುದೇನು ಗೊತ್ತಾ?
ರೆಬಲ್ ಸ್ಟಾರ್ ಅಂಬರೀಷ್ ಅವರ 69ನೇ ಜನ್ಮದಿನ. ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಇಂದು ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಕೊವಿಡ್ ಹಾವಳಿ ಹೆಚ್ಚಿರುವುದರಿಂದ ಸೋಶಿಯಲ್ ಮೀಡಿಯಾ ಮೂಲಕವೇ ಶುಭ ಕೋರಲಾಗುತ್ತಿದೆ. ಅಂಬರೀಷ್ ಜೊತೆ ಆಪ್ತ ಒಡನಾಟ ಹೊಂದಿದ್ದ ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದ ಮೂಲಕ ರೆಬಲ್ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಕಿಚ್ಚ ಸುದೀಪ್ ಹಾಗೂ ಅಂಬರೀಷ್ ಅವರು ಒಂದಷ್ಟು ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ‘ನಿಮ್ಮನ್ನು ನಿಜಕ್ಕೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಮಾಮ’ ಎಂದು ಅವರು ಅಂಬರೀಷ್ಗೆ ಜನ್ಮದಿನದ ಶುಭ ಕೋರಿದ್ದಾರೆ. ವೀರ ಪರಂಪರೆ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಗಳಲ್ಲಿ ಸುದೀಪ್ ಮತ್ತು ಅಂಬರೀಷ್ ಜೊತೆಯಾಗಿ ಕೆಲಸ ಮಾಡಿದ್ದರು.
ನಟ ಕಿಚ್ಚ ಸುದೀಪ್, ಅಂಬರೀಶ್ ಅವರಿಗೆ ಆತ್ಮೀಯರಾಗಿದ್ದ ನಟರಲ್ಲಿ ಒಬ್ಬರು. ಅಂಬರೀಶ್ ನಟನೆಯ ಕೊನೆಯ ಚಿತ್ರ ‘ಅಂಬಿ ನಿಂಗೆ ವಯಸ್ಸಾಯ್ತೋ’ದಲ್ಲಿ ಸುದೀಪ್ ನಟಿಸಿದ್ದರು. ಅಂಬರೀಷ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಸುದೀಪ್, ‘ಮಿಸ್ ಯೂ ಮಾಮಾ’ ಎಂದು ಹೃದಯದ ಸಂಕೇತಗಳನ್ನು ಹಾಕಿದ್ದಾರೆ.
ಸುದೀಪ್ ಹಾಗೂ ಅಂಬಿ ಅವರ ಕುಟುಂಬದ ನಡುವೆ ಬಹಳ ಆತ್ಮೀಯವಾದ ಸಂಬಂಧವಿದೆ. ಚಿಕ್ಕಂದಿನಿಂದಲೂ ಅಂಬಿಯನ್ನು ಮಾಮ ಎಂದೇ ಕರೆಯುತ್ತಿದ್ದರಂತೆ ಸುದೀಪ್. ಅಂಬರೀಷ್ ಅಗಲಿದಾಗಲೂ ತಮ್ಮ ಬಳಿ ಇದ್ದ ಹಳೇ ಫೋಟೋ ಹಂಚಿಕೊಂಡು ಕಂಬನಿ ಮಿಡಿದಿದ್ದರು ಕಿಚ್ಚ.
ಅಂಬಿ ಅವರ 69ನೇ ಹುಟ್ಟುಹಬ್ಬದಂದು ಟ್ವೀಟ್ ಮೂಲಕ ನೆನಪಿಸಿಕೊಂಡಿರುವ ಸುದೀಪ್, ನಿಜವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಮಾಮ ಎಂದು ಬರೆದುಕೊಂಡಿದ್ದಾರೆ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.