NEWS

ಚಾರ್ಲಿ ನೋಡಿ ಬಿಕ್ಕಿ ಬಿಕ್ಕಿ ಅತ್ತ ಸಿಎಂ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ದೇಶದಾಂದ್ಯಂತ ಬಿಡುಗಡೆಗೊಂಡಿರುವ ‘777 ಚಾರ್ಲಿ’ ಸಿನಿಮಾ ಎಲ್ಲರ ಹೃದಯವನ್ನು ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಟೀಂ ಹಾಗೂ ನಿರ್ದೇಶಕ ಕಿರಣ್ ರಾಜ್ ಶ್ರಮದಿಂದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಕನ್ನಡದ ನಟ-ನಟಿಯರು ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ನಟ-ನಟಿಯರು ಬೆಂಬಲಕ್ಕೆ ನಿಂತು ಮತ್ತಷ್ಟು ಹುರುಪ್ಪನ್ನು ನೀಡಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಹೌದು, ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ‘777 ಚಾರ್ಲಿ’ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಖುದ್ದು ಸಿನಿಮಾ ಥಿಯೇಟರ್‍ಗೆ ತೆರಳಿ ವೀಕ್ಷಿಸಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್ ​PVRನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರತಂಡದೊಂದಿಗೆ ಸಿಎಂ ಬೊಮ್ಮಾಯಿಯವರು ‘777 ಚಾರ್ಲಿ’ಯನ್ನು ವೀಕ್ಷಿಸಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇದೇ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಮತ್ತು ಚಿತ್ರದ ನಿರ್ದೇಶಕ ಕಿರಣ್ ರಾಜ್ ಹಾಗೂ ನಾಯಕ ನಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರಕ್ಷಿತ್ ಶೆಟ್ಟಿ ನಟನೆ ಜೊತೆ ‘ಚಾರ್ಲಿ’ ನಟನೆ ಹಾಗೂ ಇಡೀ ಚಿತ್ರತಂಡಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಸಿನಿಮಾ ನೋಡಲು ಬರುವಂತೆ ಚಿತ್ರತಂಡವು ಸಿಎಂಗೆ ಮನವಿ ಮಾಡಿತ್ತು, ಅವರ ಮನವಿಗೆ ಸ್ಪಂದಿಸಿ ಸಿನಿಮಾ ವೀಕ್ಷಿಸಿ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ ಸಿಎಂ ಭಾವುಕರಾಗಿ ಪ್ರಾಣಿ ಪ್ರೇಮಿಗಳಿಗೆ ಈ ಸಿನಿಮಾ ನೋಡುವಂತೆ ಕರೆ ನೀಡಿದ್ದಾರೆ.

 

ಈ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಟ್ರೈಲರ್ ಮೂಲಕವೇ ಅಭಿಮಾನಿಗಳ ಕಣ್ಣಲ್ಲಿ ನೀರನ್ನು ತರಿಸಿದ್ದ ಈ ಚಿತ್ರ ನಿಜಕ್ಕೂ ಭಾವುಕತೆಯನ್ನು ಹೊಂದಿದ್ದು, ನಾಯಿ ಪ್ರೇಮಿಗಳಿಗೆ ಇನ್ನೂ ಹೆಚ್ಚು ಇಷ್ಟವಾಗಬಹುದು. ಒಂದು ಮಾತಿದೆ, ನಿಮ್ಮನ್ನ ಯಾರಾದರೂ ಜೀವನ ಪರ್ಯಾಂತ ಪ್ರೀತಿಸಿಬೇಕು ಎಂದಿದ್ದರೆ, ನಾಯಿಯನ್ನು ಸಾಕಿ, ಅವುಗಳಿಗೆ ಆಹಾರ ಹಾಕಿ ಎನ್ನಲಾಗುತ್ತದೆ. ಈ ಸಿನಿಮಾ ಹಾಗೂ ಈ ಮಾತು ಒಂದಕ್ಕೊಂದು ಸಂಬಂಧವಿದೆ ಎನ್ನಬಹುದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published.

Back to top button

You cannot copy content of this page