NEWS

ಕ್ರೇಜಿಸ್ಟಾರ್ ಮಗ ಗೆದ್ರಾ ಸೋತ್ರಾ…..ಜನಾ ಹೇಳಿದ್ದೆನು ನೋಡಿ

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಾಲ ನಟನಾಗಿ ಗುರುತಿಸಿಕೊಂಡವರು. ಇದೀಗ ಅವರು ಹೀರೋ ಆಗಿ ಬೆಳ್ಳಿತೆರೆ ಮೇಲೆ ಕಾಲಿಟ್ಟಿದ್ದಾರೆ. ‘ತ್ರಿವಿಕ್ರಮ’ ಸಿನಿಮಾದಲ್ಲಿ ವಿಕ್ರಮ್ ಹೀರೋ ಆಗಿದ್ದು, ಸಹನಮೂರ್ತಿ ಈ ಸಿನಿಮಾದ ನಿರ್ದೇಶಕ. ‘ತ್ರಿವಿಕ್ರಮ’ ಹೇಗಿದೆ? ವಿಕ್ರಮ್‌ಗೆ ಎಂಟ್ರಿಗೆ ಇದು ಸರಿಯಾದ ಸಿನಿಮಾವೇ? ಮುಂದೆ ಓದಿ.ತಮ್ಮ ಚೊಚ್ಚಲ ಸಿನಿಮಾಗೆ ಪಕ್ಕಾ ಕಮರ್ಷಿಯಲ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ ವಿಕ್ರಮ್.

ಇಲ್ಲಿ ಅವರು ಮಿಡಲ್ ಕ್ಲಾಸ್‌ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿ ಮಗನಾಗಿ, ಕುಟುಂಬಕ್ಕೆ ಹೆಗಲಾಗಿ ನಿಲ್ಲುವ ಹುಡುಗನಾಗಿ, ಪಾಲಕರ ಮುದ್ದಿನ ಪುತ್ರನಾಗಿ ತೆರೆಮೇಲೆ ಮಿಂಚಿದ್ದಾರೆ. ಇಂಥ ಒಬ್ಬ ಸಾಮಾನ್ಯ ಕುಟುಂಬದ ಹುಡುಗನಿಗೆ ಶ್ರೀಮಂತ ಕುಟುಂಬದ ಹುಡುಗಿ ತ್ರಿಷಾ ಲವ್ ಆಗುತ್ತದೆ. ವಿಕ್ಕಿ ಪಕ್ಕಾ ಮಾಸ್ ಹುಡುಗ. ತನ್ನ ಕುಟುಂಬಕ್ಕೆ ಯಾರಾದ್ರೂ ತೊಂದರೆ ಕೊಟ್ಟರೆ, ಅವರನ್ನು ಚಚ್ಚುತ್ತಾನೆ. ಆದರೆ ಒಂದು ಇರುವೆಗೆನೋವಾದರೂ, ಸಾಕು ಬೆಚ್ಚುತ್ತಾಳೆ ನಾಯಕಿ ತ್ರಿಷಾ. ಇಂಥ ಎರಡು ಭಿನ್ನ ಮನಸ್ಥಿತಿಗಳ ನಡುವೆ ಪ್ರೀತಿಯಾದರೆ ಹೇಗಿರುತ್ತದೆ? ಇದೇ ‘ತ್ರಿವಿಕ್ರಮ’ನ ಬೇಸಿಕ್ ಒನ್‌ಲೈನ್‌.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮೊದಲ ಸಿನಿಮಾದಲ್ಲಿ ವಿಕ್ರಮ್‌ ಪಾಸ್‌ ನಟ ವಿಕ್ರಮ್‌ ರವಿಚಂದ್ರನ್‌ಗೆ ಹೀರೋ ಆಗಿ ಇದು ಮೊದಲ ಸಿನಿಮಾವಾದರೂ ಚೊಚ್ಚಲ ಪ್ರಯತ್ನದಲ್ಲೇ ಉತ್ತಮ ಸ್ಕೋರ್ ಮಾಡಿದ್ದಾರೆ. ಮಾಸ್ ಆಡಿಯೆನ್ಸ್‌ಗೆ ಬೇಕಾದ ಲುಕ್‌ ಅವರಲ್ಲಿ ಇದೆ. ಫೈಟ್ಸ್, ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ.ನಟನೆಯಲ್ಲಿ ಇನ್ನೊಂದು ಚೂರು ಪಳಗಿದರೆ, ಕನ್ನಡಕ್ಕೆ ಮತ್ತೊಬ್ಬ ಮಾಸ್‌ ಹೀರೋ ಸಿಕ್ಕಂತೆಯೇ. ನಾಯಕಿ ಅಕಾಂಕ್ಷಾಗೆ ಇದು ಮೊದಲ ಸಿನಿಮಾ. ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.

ತೆರೆಮೇಲೂ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ, ಸಾಧು ಕೋಕಿಲ ಇದ್ದರೂ ಕೂಡ ಕಾಮಿಡಿ ಸೀನ್‌ಗಳು ಇನ್ನೂ ಬೇಕಿತ್ತು ಎನಿಸುತ್ತದೆ. ಅಮ್ಮನಾಗಿ ತುಳಸಿ ಶಿವಮಣಿ ಮತ್ತು ಅಪ್ಪನಾಗಿ ಸುಚೇಂದ್ರ ಪ್ರಸಾದ್ ನಟನೆ ಅಚ್ಚುಕಟ್ಟು. ಜಯಪ್ರಕಾಶ್, ಆದಿ ಲೋಕೇಶ್‌, ಶಿವಮಣಿ, ರೋಹಿತ್‌ ರಾಯ್‌ ನಟನೆ ಉತ್ತಮವಾಗಿದೆ. ‘ಮಜಾಭಾರತ’ ಖ್ಯಾತಿಯ ಕಾರ್ತಿಕ್‌ಗೆ ಮಹತ್ವದ ಪಾತ್ರ ಸಿಕ್ಕಿದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಿರ್ದೇಶಕ ಸಹನಮೂರ್ತಿ ಬರೆದಿರುವ ಕಥೆಯಲ್ಲಿ ತಾಜಾತನ ಕಮ್ಮಿ ಇದ್ದರೂ, ಒಬ್ಬ ಹೊಸ ಹೀರೋ ಲಾಂಚ್‌ಗೆ ಬೇಕಾದ ಅಂಶಗಳೆಲ್ಲ ಇದೆ. ಫೈಟ್ ಮೂಲಕ ಹೀರೋ ಇಂಟ್ರೋಡಕ್ಷನ್ ಮಾಡಿಸುವ ನಿರ್ದೇಶಕರು, ಲವ್ ಬಗ್ಗೆ, ಲವ್ ಬ್ರೇಕ್‌ಅಪ್‌ ಬಗ್ಗೆ, ಮಿಡಲ್ ಕ್ಲಾಸ್ ಹುಡುಗರ ಜೀವನದ ಕುರಿತು ಪಂಚಿಂಗ್ ಡೈಲಾಗ್ ಹೇಳಿಸಿದ್ದಾರೆ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಸಿದ್ಧಸೂತ್ರಗಳನ್ನು ನೀಟ್ ಆಗಿ ಫಾಲೋ ಮಾಡಿದ್ದಾರೆ. ಕೆಲವು ಕಡೆ ಕಥೆಗಿಂತಲೂ ಸಿನಿಮಾದ ಮೆರುಗನ್ನು ಹೆಚ್ಚಿಸಲು ಬೇಕಾದ ದೃಶ್ಯಗಳ ಮೇಲೆ ಗಮನ ನೀಡಿರುವುದು ಗೊತ್ತಾಗುತ್ತದೆ. ಆಕ್ಷನ್ ಸೀನ್‌ಗಳು ಮಾಸ್ ಪ್ರಿಯರಿಗೆ ಖುಷಿ ನೀಡುತ್ತವೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button