ಇಂದ್ರಜಿತ್ ಲಂಕೇಶ್ ವಿರುದ್ಧ ಸಿಡಿದೆದ್ದ ಮೇಘನಾ ರಾಜ್..ಮೇಘನಾ ರಾಜ್ ಮಾತಿಗೆ ಶಾಕ್ ಆಗಿ ಕಣ್ಣೀರಿಟ್ಟ ಇಂದ್ರಜಿತ್
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟಿನ ಬಗ್ಗೆ ಮಾತನಾಡುತ್ತಾ ಇಂದ್ರಜಿತ್ ಲಂಕೇಶ್, ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಪ್ರಶ್ನೆ ಮಾಡಿದ್ದರು. ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ ಎಂದು ಕೇಳಿದ್ದರು. ಇಂದ್ರಜಿತ್ ಹೇಳಿಕೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಸತ್ತ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದು ನಟ ದರ್ಶನ್, ಸುದೀಪ್ ಸೇರಿದಂತೆ ಅನೇಕರು ಖಂಡಿಸಿದ್ದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದೆ. ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೃಘನಾ ರಾಜ್ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು.
ಫಿಲ್ಮ್ಂ ಚೇಂಬರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಂದ್ರಜಿತ್ ಲಂಕೇಶ್, ನನ್ನಿಂದ ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈಗಾಗಲೇ ನನ್ನ ಹೇಳಿಕೆಯನ್ನು ನಾನು ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ ಮತ್ತು ತಮ್ಮ ಇದ್ದಂತೆ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮಿಸಬೇಕು’ ಎಂದಿದ್ದ
ನಾನು ಚಿರಂಜೀವಿಗೂ ಡ್ರಗ್ ಮಾಫಿಯಾಗೂ ಲಿಂಕ್ ಮಾಡಿ ಮಾತನಾಡಿಲ್ಲ. ಪೋಸ್ಟ್ ಮಾರ್ಟಂ ಆಗಬೇಕಿತ್ತು ಅಂತೇಳಿದ್ದೇ. ಆ ಮಾತನ್ನ ನಾನೀಗ ವಾಪಸ್ ಪಡಿದಿದ್ದೇನೆ ಎಂದು ತಿಳಿಸಿದ್ದರು. ಇದೀಗ ದರ್ಶನ್ ವಿರುದ್ಧ ಲೋನ್ ವಂಚನೆ, ಹೋಟೆಲ್ ಸಪ್ಲೈಯರ್ ಮೇಲಿನ ಹಲ್ಲೆ ಆರೋಪವನ್ನು ಇಂದ್ರಜಿತ್ ಲಂಕೇಶ್ ಮಾಡಿದರೆ
ದರ್ಶನ್ ಸರ್ಜಾ ಕುಟುಂಬಕ್ಕೆ ಆತ್ಮೀಯರು. ಮೇಘನಾ ದರ್ಶನ್ ಜೊತೆ ‘ಕುರುಕ್ಷೇತ್ರ’ ಸಿನೆಮಾದಲ್ಲಿ ಬಾನುಮತಿ ಪಾತ್ರದಲ್ಲಿ ನಟಿಸಿದ್ದರು. ಒಮ್ಮೆ ಚಿರು ಮತ್ತು ಮೇಘನಾ ಅವರು ಫ್ರೆಂಚ್ ಮಾಸ್ಟಿಫ್ ನಾಯಿಮರಿಯನ್ನು ನಟ ದರ್ಶನ್‌ಗೆ ಉಡುಗೊರೆಯಾಗಿ ನೀಡಿದರು, ಅವರು ಚಿತ್ರೋದ್ಯಮದ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು. ಇದೀಗ ಇಂದ್ರಜಿತ್ ಲಂಕೇಶ್ ಆರೋಪಗಳಿಗೆ ಮೇಘನಾ ತಿರುಗೇಟು ನೀಡಿದ್ದು. ದರ್ಶನ್ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದಾರೆ.

ಇಂದ್ರಜಿತ್ ಡ್ರಗ್ಸ್ ವಿಷಯದಲ್ಲಿ, ಫೇಕ್ ಲೋನ್ ವಿಚಾರದಲ್ಲಿ, ದರ್ಶನ್ ಹಲ್ಲೆಯ ಪ್ರಕರಣದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ. ತಾವು ಪ್ರಚಾರ ಗಿಟ್ಟಿಸಲು ಸೆಲಿಬ್ರಿಟಿಗಳ ಹೆಸರನ್ನು ಬಳಸುತ್ತಿದ್ದಾರೆ. ಪತ್ರಕರ್ತರಾಗಿರುವ ಇಂದ್ರಜಿತ್ ಇಲ್ಲ ಸಲ್ಲದ ಆರೋಪಮಾಡಿ ಪ್ರಚಾರ ಪಡೆಯುವ ಚಾಳಿಯವರಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇಂದ್ರಜಿತ್ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆ ಹೊರತು ಹದಗೆಡಿಸಬಾರದು ಎಂದಿದ್ದಾರೆ ಮೇಘನಾ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644